ನವದೆಹಲಿ:ಚೋಟಾ ಅರವಿಂದ್ ಕೇಜ್ರಿವಾಲ್ ರೂಪದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದ್ದ 'ಚೋಟಾ ಮಫ್ಲರ್‌ಮ್ಯಾನ್' ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಭರ್ಜರಿ ಜಯ ಸಾಧಿಸಿದ್ದು, ಮತ ಎಣಿಕೆಯ ದಿನ ಈ 'ಚೋಟಾ ಮಫ್ಲರ್‌ಮ್ಯಾನ್' ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದ.
ಅರವಿಂದ್ ಕೇಜ್ರಿವಾಲ್ರಂತೆ ವಿ-ನೆಕ್ ಮರೂನ್ ಸ್ವೆಟರ್ ಮತ್ತು ತಲೆಯ ಸುತ್ತಲೂ ಮಫ್ಲರ್, ಪಕ್ಷದ ಚಿಹ್ನೆ ಹೊಂದಿರುವ ಗಾಂಧಿ ಟೋಪಿ, ಕನ್ನಡಕ ಧರಿಸಿ ಆಕಾಶದೆಡೆಗೆ ಕೈ ತೋರಿಸುತ್ತ ಥೇಟ್ ಕೇಜ್ರಿವಾಲ್ರಂತೆ ಕಾಣುವ ಈ ಬಾಲಕನ ಲುಕ್ಗೆ ಎಲ್ಲರೂ ಫಿದಾ ಆಗಿದ್ದರು. ಸ್ವತಃ ಎಎಪಿ ಪಕ್ಷ ತನ್ನ ಟ್ವಿಟ್ಟರ್ನಲ್ಲಿ ಈ ಫೋಟೋವನ್ನ ಹಂಚಿಕೊಂಡಿತ್ತು.
ಪ್ರಮಾಣವಚನ ಕಾರ್ಯಕ್ರಮದಲ್ಲಿ ಚೋಟಾ ಮಫ್ಲರ್‌ಮ್ಯಾನ್ ರಾಮಲೀಲಾ ಮೈದಾನದಲ್ಲಿ ನಡೆದ ಪ್ರಮಾಣವಚನ ಕಾರ್ಯಕ್ರಮಕ್ಕೆ ಚೋಟಾ ಮಫ್ಲರ್ಮ್ಯಾನ್ಗೆ ಎಎಪಿ ಪಕ್ಷದಿಂದಲೇ ಅಧಿಕೃತವಾಗಿ ವಿಶೇಷ ಆಹ್ವಾನ ನೀಡಲಾಗಿತ್ತು. ಒಂದೆಡೆ ಕೇಜ್ರಿವಾಲ್ ಮೂರನೇ ಬಾರಿಗೆ ರಾಷ್ಟ್ರ ರಾಜಧಾನಿಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದರು. ಇನ್ನೊಂದೆಡೆ, ಎಎಪಿ ಪಕ್ಷದ ಶಾಸಕರೂ ಮುಖಂಡರೂ ಸೇರಿದಂತೆ ಅನೇಕರು ಈ 'ಚೋಟಾ ಮಫ್ಲರ್‌ಮ್ಯಾನ್' ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು.
ಇನ್ನು, ಬಾಲಕನ ಬಗ್ಗೆ ಮಾತನಾಡಿರುವ ಆತನ ತಂದೆ ರಾಹುಲ್ ತೋಮರ್, ಅರವಿಂದ್ ಕೇಜ್ರಿವಾಲ್ ಅವರಂತೆ ಬಾಲಕನನ್ನ ರೆಡಿ ಮಾಡಬೇಕೆಂಬುದು ಅವರ ತಾಯಿಯ ಆಲೋಚನೆ. ಈ ವಯಸ್ಸಿನಲ್ಲಿ, ಅವನು ಕೇಜ್ರಿವಾಲ್ ಅವರ ಉಡುಪನ್ನು ನಕಲಿಸಬಹುದು. ಆದರೆ ಅವನು ಬೆಳೆದಂತೆ, ಕೇಜ್ರಿವಾಲ್ ನಂತಹ ಪ್ರಾಮಾಣಿಕ ಮತ್ತು ಕಷ್ಟಪಟ್ಟು ಕೆಲಸ ಮಾಡುವ ವ್ಯಕ್ತಿಯನ್ನಾಗಿಸಲು ನಾವು ಪ್ರಯತ್ನಿಸುತ್ತೇವೆ. ನಾವೆಲ್ಲರೂ ಕೇಜ್ರಿವಾಲ್ ಅವರ ನೀತಿಗಳನ್ನು ಇಷ್ಟಪಡುತ್ತೇವೆ ಎಂದಿದ್ದಾರೆ.
ಪ್ರಮಾಣವಚನ ಕಾರ್ಯಕ್ರಮದಲ್ಲಿ ಚೋಟಾ ಮಫ್ಲರ್‌ಮ್ಯಾನ್