ಧಮ್ತರಿ (ಛತ್ತೀಸಗಢ): ಧಮ್ತರಿ ಪ್ರದೇಶದಲ್ಲಿ ಆನೆಗಳ ಸಾವಿನ ಪ್ರಕರಣಗಳು ಮುಂದುವರೆದಿವೆ. ಇತ್ತೀಚೆಗೆ ಸೂರಜ್ಪುರದಲ್ಲಿ ಆನೆಯ ಸಾವಿನ ನಂತರ ಈಗ ಧಮ್ತರಿಯಲ್ಲಿ ಆನೆ ಮರಿಯೊಂದು ಸಾವಿಗೀಡಾಗಿದೆ. ಗರಿಯಾಬಂದ್ನಿಂದ ಧಮ್ತರಿಗೆ ತೆರಳುತ್ತಿದ್ದ 21 ಆನೆಗಳ ಹಿಂಡಿನಲ್ಲಿದ್ದ ಮರಿಯಾನೆ ಕೆಸರಿನಲ್ಲಿ ಸಿಲುಕಿ ಮೇಲೆ ಬರಲಾಗದೆ ಸಾವನ್ನಪ್ಪಿದೆ.
ಕೆಸರಿನಲ್ಲಿ ಸಿಲುಕಿದ್ದ ಮರಿಯಾನೆ ಸಾವು - ಅರಣ್ಯ ಇಲಾಖೆ
ಧಮ್ತರಿ ಜಿಲ್ಲೆಯ ಉರಪಟ್ಟಿ ಗ್ರಾಮದಲ್ಲಿ ಆನೆಮರಿ ಸಾವೀಗೀಡಾಗಿದ್ದನ್ನು ಗಮನಿಸಿದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಆದರೆ ಅಷ್ಟೊತ್ತಿಗೆ ಆನೆಗಳ ಹಿಂಡು ಸತ್ತ ಮರಿಯಾನೆಯನ್ನು ಬಿಟ್ಟು ಬಹುದೂರ ಸಾಗಿದ್ದವು. ಗರಿಯಾಬಂದ್ ಪ್ರದೇಶದ 21 ಆನೆಗಳ ಹಿಂಡೊಂದು ದಾರಿತಪ್ಪಿ ಕಳೆದ ಒಂದು ವಾರದಿಂದ ಧಮ್ತರಿ ಪ್ರದೇಶದ ಅರಣ್ಯದಲ್ಲಿ ಸುತ್ತಾಡುತ್ತಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ ಕಳೆದ ಕೆಲ ದಿನಗಳಿಂದ ಈ ಪ್ರದೇಶದಲ್ಲಿ ಪದೇ ಪದೇ ಆನೆಗಳು ಸಾವಿಗೀಡಾಗುತ್ತಿವೆ. ಸೂರಜ್ಪುರದ ಪ್ರತಾಪಪುರ ವನವಿಭಾಗದಲ್ಲಿ 4 ಹೆಣ್ಣಾನೆಗಳು ಕೆಲ ದಿನದ ಹಿಂದೆ ಮೃತಪಟ್ಟಿದ್ದವು. ಈ ಪ್ರಕರಣದಿಂದ ಅರಣ್ಯ ಇಲಾಖೆಯಲ್ಲಿ ಆತಂಕ ಸೃಷ್ಟಿಯಾಗಿತ್ತು. ಅರಣ್ಯ ಸಚಿವ ಮೊಹಮ್ಮದ್ ಅಕ್ಬರ್ ಅವರು ಆನೆಗಳ ಸಾವಿನ ಪ್ರಕರಣದ ತನಿಖೆಗೆ ಆದೇಶ ನೀಡಿದ್ದರು.