ಕರ್ನಾಟಕ

karnataka

ಅಗಲಿದ ನಾಯಕರು... ಮೋದಿ ನೇತೃತ್ವದ ಎನ್​ಡಿಎ ಸರ್ಕಾರದಲ್ಲಿದ್ದ ಸಚಿವರಿವರು

By

Published : Oct 9, 2020, 1:26 AM IST

Updated : Oct 9, 2020, 6:28 AM IST

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಎರಡನೇ ಅವಧಿಗೆ ಅಧಿಕಾರ ನಡೆಸುತ್ತಿದೆ. 2014ರಿಂದ ಇಲ್ಲಿಯವರೆಗೆ ಪಿಎಂ ಮೋದಿ ಸರ್ಕಾರದಲ್ಲಿ ಸೇವೆ ಸಲ್ಲಿಸಿದ ಹಾಗೂ ಸೇವೆ ಸಲ್ಲಿಸುತ್ತಿದ್ದ ಕೆಲ ಪ್ರಮುಖ ಸಚಿವರು ನಿಧನ ಹೊಂದಿದ್ದಾರೆ.

list-of-union-ministers-who-died-during-nda-regime
ಎನ್​ಡಿಎ ಸರ್ಕಾರದಲ್ಲಿ ಸೇವೆ ಸಲ್ಲಿಸಿ ವಿಧವಶರಾದ ಸಚಿವರಿವರು

ನವದೆಹಲಿ :ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ನಿನ್ನೆ (ಗುರುವಾರ) ನಿಧನರಾಗಿದ್ದಾರೆ. 2014ರಿಂದ ಇಲ್ಲಿಯವರೆಗೆ ಎನ್​ಡಿಎ ಸರ್ಕಾರದ ಎರಡೂ ಅವಧಿಯಲ್ಲಿ ವಿಧಿವಶರಾದ ​ಸಚಿವರು ಹಾಗೂ ಸಚಿವರಾಗಿ ಸೇವೆ ಸಲ್ಲಿಸಿದವರ ಮಾಹಿತಿ ಇಲ್ಲಿದೆ.

ಗೋಪಿನಾಥ್ ಮುಂಡೆ :

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಗೋಪಿನಾಥ್ ಮುಂಡೆ ಅವರು 2014ರ ಜೂನ್ 3ರಂದು, ಅಂದರೆ ಸರ್ಕಾರ ಅಧಿಕಾರಕ್ಕೆ ಬಂದ ಕೆಲ ದಿನಗಳಲ್ಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಿಧನರಾದರು.

ಅನಿಲ್ ಮಾಧವ್ ಡೇವ್ :

ಕೇಂದ್ರ ಪರಿಸರ ಸಚಿವರಾಗಿದ್ದ ಮಧ್ಯಪ್ರದೇಶದ ನಾಯಕ ಅನಿಲ್ ಮಾಧವ್ ಡೇವ್ 2017ರ ಮೇ 18ರಂದು ಹೃದಯ ಸ್ತಂಭನದಿಂದ ಎಲ್ಲರನ್ನು ಅಗಲಿದ್ದರು.

ಅನಂತ್ ಕುಮಾರ್ :

ಕರ್ನಾಟಕದ ಪ್ರಮುಖ ರಾಜಕಾರಣಿ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾಗಿದ್ದ ಅನಂತ್ ಕುಮಾರ್ (59) ಅವರು 2018ರ ನವೆಂಬರ್ 12ರಂದು ಇಹಲೋಕ ತ್ಯಜಿಸಿದರು. ಇವರು ಶ್ವಾಸಕೋಶದ ಕ್ಯಾನ್ಸರ್​​ನಿಂದ ಬಳಲುತ್ತಿದ್ದರು.

ಅನಂತ್​ ಕುಮಾರ್​

ಸುರೇಶ್ ಅಂಗಡಿ :

ಇತ್ತೀಚೆಗೆ ನಿಧನರಾದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ಕೊರೊನಾ ವೈರಸ್​​ ತಗುಲಿತ್ತು. ಕೋವಿಡ್ -19ನಿಂದ ಚೇತರಿಸಿಕೊಳ್ಳದ ಅವರು ಸೆಪ್ಟೆಂಬರ್ 23ರಂದು ವಿಧಿವಶರಾದರು. ಕರ್ನಾಟಕದ ಬೆಳಗಾವಿಯಿಂದ ನಾಲ್ಕನೇ ಅವಧಿಗೆ ಸಂಸದರಾಗಿದ್ದರು.

ಸುರೇಶ್ ಅಂಗಡಿ

ರಾಮ್ ವಿಲಾಸ್ ಪಾಸ್ವಾನ್ :

ಇತ್ತೀಚೆಗೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಕೂಡ ಗುರುವಾರ (ಅ.8) ನಿಧನರಾಗಿದ್ದಾರೆ. ಐದು ದಶಕಗಳಿಗಿಂತಲೂ ಹೆಚ್ಚು ಕಾಲ ಸಕ್ರಿಯ ರಾಜಕೀಯದಲ್ಲಿದ್ದ ಕೇಂದ್ರ ಸಚಿವ ರಾಮ್​ ವಿಲಾಸ್​ ಪಾಸ್ವಾನ್​ ಏಮ್ಸ್​​​ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ರಾಮ್ ವಿಲಾಸ್ ಪಾಸ್ವಾನ್

ಸಚಿವರಾಗಿಲ್ಲದಿದ್ದಾಗ ನಿಧನರಾದವರು:

ಅರುಣ್​ ಜೇಟ್ಲಿ:

ಅರುಣ್ ಜೇಟ್ಲಿ ಅವರು ಆಗಸ್ಟ್ 24, 2019 ರಂದು ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ ಬಹು ಅಂಗಾಂಗ ವೈಫಲ್ಯದಿಂದ ನಿಧನರಾದರು. ಅವರಿಗೆ 66 ವರ್ಷ ವಯಸ್ಸಾಗಿತ್ತು. 26 ಮೇ, 2014ರಿಂದ 14 ಮೇ, 2018ರವರೆಗೆ ಹಣಕಾಸು, 13 ಮಾರ್ಚ್, 2017ರಿಂದ ಸೆಪ್ಟೆಂಬರ್ 3, 2017ರವರೆಗೆ ರಕ್ಷಣಾ ಖಾತೆ, 26 ಮೇ, 2014ರಿಂದ 14 ಮೇ, 2018ರವರೆಗೆ ಕಾರ್ಪೊರೇಟ್ ವ್ಯವಹಾರ ಹಾಗೂ 9 ನವೆಂಬರ್, 2014ರಿಂದ 5 ಜುಲೈ, 2016ರವರೆಗೆ ಮಾಹಿತಿ ಮತ್ತು ಪ್ರಸಾರ ಸಚಿವರಾಗಿ ಜೇಟ್ಲಿ ಸೇವೆ ಸಲ್ಲಿಸಿದ್ದರು. ಬಿಜೆಪಿಯ ಟ್ರಬಲ್​ ಶೂಟರ್​ ಎಂದೇ ಜೇಟ್ಲಿ ಖ್ಯಾತರಾಗಿದ್ದರು.

ಅರುಣ್​ ಜೇಟ್ಲಿ

ಸುಷ್ಮಾ ಸ್ವರಾಜ್ :

ವಿದೇಶಾಂಗ ಸಚಿವ ಸ್ವರಾಜ್ ಸಚಿವರಾಗಿದ್ದ ಸುಷ್ಮಾ ಸ್ವರಾಜ್ ಅವರು 2014ರ ಮೇ ತಿಂಗಳಿಂದ 2019ರ ಮೇವರೆಗೆ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅವರು ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದರು.

ಸುಷ್ಮಾ ಸ್ವರಾಜ್

ಮನೋಹರ್ ಪರಿಕ್ಕರ್ :

ಪರಿಕ್ಕರ್ ಅವರು ನಿಧನರಾದಾಗ ಗೋವಾ ಮುಖ್ಯಮಂತ್ರಿಯಾಗಿದ್ದರು. ಅವರು 2014 ಮತ್ತು 2017ರ ಅವಧಿಯಲ್ಲಿ ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದ್ದರು. 2019ರ ಮಾರ್ಚ್ 17ರಂದು ತಮ್ಮ 63ನೇ ವಯಸ್ಸಿನಲ್ಲಿ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್​ನಿಂದ ಪಣಜಿಯಲ್ಲಿರುವ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದರು.

ಮನೋಹರ್ ಪರಿಕ್ಕರ್
Last Updated : Oct 9, 2020, 6:28 AM IST

ABOUT THE AUTHOR

...view details