2020ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಗೆ ವಿಶ್ವ ಸಂಸ್ಥೆಯ ಭಾಗವಾಗಿರುವ ವಿಶ್ವ ಆಹಾರ ಯೋಜನೆ (ಡಬ್ಲ್ಯುಎಫ್‌ಪಿ) ಆಯ್ಕೆ ಮಾಡಲಾಗಿದೆ.
ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನವಾದ ಅಂತಾರಾಷ್ಟ್ರೀಯ ಸಂಸ್ಥೆಗಳು - ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಸಂಸ್ಥೆಗಳು
ನೊಬೆಲ್ ಶಾಂತಿ ಪ್ರಶಸ್ತಿಯನ್ನು 1901ರಿಂದ ಮತ್ತು 2020ರ ನಡುವೆ 101 ಬಾರಿ, 135 ವಿಜೇತರಿಗೆ (ವ್ಯಕ್ತಿಗಳು ಹಾಗೂ ಸಂಸ್ಥೆಗಳು) ನೀಡಿ ಗೌರವಿಸಲಾಗಿದೆ. ಇದರಲ್ಲಿ 107 ವ್ಯಕ್ತಿಗಳು ಮತ್ತು 28 ಸಂಸ್ಥೆಗಳಿಗೆ ಈ ಅತ್ಯುನ್ನತ ಪ್ರಶಸ್ತಿ ಲಭಿಸಿದೆ.
ನೊಬೆಲ್ ಶಾಂತಿ ಪ್ರಶಸ್ತಿ
ನೊಬೆಲ್ ಶಾಂತಿ ಪ್ರಶಸ್ತಿಯನ್ನು 1901ರಿಂದ ಮತ್ತು 2020ರ ನಡುವೆ 101 ಬಾರಿ, 135 ವಿಜೇತರಿಗೆ (ವ್ಯಕ್ತಿಗಳು ಹಾಗೂ ಸಂಸ್ಥೆಗಳು) ನೀಡಿ ಗೌರವಿಸಲಾಗಿದೆ. ಇದರಲ್ಲಿ 107 ವ್ಯಕ್ತಿಗಳು ಮತ್ತು 28 ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಈ ಅತ್ಯುನ್ನತ ಪ್ರಶಸ್ತಿ ಲಭಿಸಿದೆ.
ರೆಡ್‌ಕ್ರಾಸ್ ಅಂತಾರಾಷ್ಟ್ರೀಯ ಸಮಿತಿ ಮೂರು ಬಾರಿ (1917, 1944 ಮತ್ತು 1963), ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್ ಕಚೇರಿ ಎರಡು ಬಾರಿ (1954 ಮತ್ತು 1981) ಈ ಶಾಂತಿ ಪುರಸ್ಕಾರ ಪಡೆದಿವೆ.
- ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಅಂತಾರಾಷ್ಟ್ರೀಯ ಸಂಸ್ಥೆಗಳ ಪಟ್ಟಿ:
- 2020 - ವಿಶ್ವ ಆಹಾರ ಕಾರ್ಯಕ್ರಮ (ಡಬ್ಲ್ಯುಎಫ್‌ಪಿ)
- 2017 - ಅಂತಾರಾಷ್ಟ್ರೀಯ ಪರಮಾಣು ಶಸ್ತ್ರಾಸ್ತ್ರ ನಿರ್ಮೂಲನಾ ಅಭಿಯಾನ (ಐಸಿಎಎನ್)
- 2015 - ಟ್ಯುನೇಷಿಯಾದ ರಾಷ್ಟ್ರೀಯ ಸಂವಾದ ಸಮೂಹ
- 2013 - ರಾಸಾಯನಿಕ ಶಸ್ತ್ರಾಸ್ತ್ರಗಳ ನಿಷೇಧ ಸಂಸ್ಥೆ (ಒಪಿಸಿಡಬ್ಲ್ಯೂ)
- 2012 - ಯುರೋಪಿಯನ್ ಯೂನಿಯನ್ (ಇಯು)
- 2007 - ಹವಾಮಾನ ಬದಲಾವಣೆ ಬಗ್ಗೆ ಅಂತರ್ ಸರ್ಕಾರಿ ಸಮಿತಿ (ಐಪಿಸಿಸಿ)
- 2006 - ಗ್ರಾಮೀಣ ಬ್ಯಾಂಕ್
- 2005 - ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (ಐಎಇಎ)
- 2001 - ವಿಶ್ವಸಂಸ್ಥೆ (ಯು.ಎನ್.)
- 1999 - ಮೆಡೆಸಿನ್ಸ್ ಸಾನ್ಸ್ ಫ್ರಾಂಟಿಯರ್ಸ್ ಸಂಸ್ಥೆ
- 1997 - ಅಂತಾರಾಷ್ಟ್ರೀಯ ಲ್ಯಾಂಡ್‌ಮೈನ್ ನಿಷೇಧ ಅಭಿಯಾನ (ಐಸಿಬಿಎಲ್)
- 1995 - ವಿಜ್ಞಾನ ಮತ್ತು ವಿಶ್ವ ವ್ಯವಹಾರಗಳ ಪಗ್ವಾಶ್ ಸಮ್ಮೇಳನ
- 1988 - ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆ
- 1985 - ಪರಮಾಣು ಯುದ್ಧ ತಡೆಗಟ್ಟುವಿಕೆಗಾಗಿ ಅಂತಾರಾಷ್ಟ್ರೀಯ ವೈದ್ಯರಿಗೆ
- 1981, 1954 - ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್ ಕಚೇರಿ (ಯುಎನ್‌ಹೆಚ್‌ಸಿಆರ್)
- 1977 - ಅಮ್ನೆಸ್ಟಿ ಇಂಟರ್ನ್ಯಾಷನಲ್ (ರಾಜದ್ರೋಹದ ಕ್ಷಮಾಪಣೆಯ ಅಂತಾರಾಷ್ಟ್ರೀಯ ಸಂಸ್ಥೆ)
- 1969 - ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (I.L.O.)
- 1965 - ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್)
- 1963,1944,1917 - ರೆಡ್‌ಕ್ರಾಸ್‌ನ ಅಂತಾರಾಷ್ಟ್ರೀಯ ಸಮಿತಿ, ರೆಡ್ ಕ್ರಾಸ್ ಸೊಸೈಟಿಗಳ ಲೀಗ್
- 1947 - ಫ್ರೆಂಡ್ಸ್ ಸರ್ವಿಸ್ ಕೌನ್ಸಿಲ್ (ದಿ ಕ್ವೇಕರ್ಸ್) ಅಮೆರಿಕನ್ ಫ್ರೆಂಡ್ಸ್ ಸರ್ವಿಸ್ ಕಮಿಟಿ (ದಿ ಕ್ವೇಕರ್ಸ್)
- 1938 - ನ್ಯಾನ್ಸೆನ್ ಅಂತಾರಾಷ್ಟ್ರೀಯ ನಿರಾಶ್ರಿತರ ಕಚೇರಿ (Nansen International Office for Refuge)
- 1910 - ಅಂತಾರಾಷ್ಟ್ರೀಯ ಶಾಶ್ವತ ಶಾಂತಿ ಬ್ಯೂರೋ
- 1904 - ಅಂತಾರಾಷ್ಟ್ರೀಯ ಕಾನೂನು ಸಂಸ್ಥೆ