ಕರ್ನಾಟಕ

karnataka

ETV Bharat / bharat

ಲಾಕ್​ಡೌನ್​ ವೇಳೆಯೇ ವೈನ್​​ಶಾಪ್​​  ಶೆಟರ್ ಮುರಿದು ಖದೀಮರ ಕೈಚಳಕ - ಕೋವಿಡ್​-19

ಲಾಕ್​ಡೌನ್​ ಜಾರಿಯಲ್ಲಿದ್ದರೂ ಕಳ್ಳರ ಕೈಚಳಕ ಮುಂದುವರೆದಿದೆ. ದೆಹಲಿಯ ವೈನ್​ ಶಾಪ್​ ಒಂದರ ಶೆಟರ್ ಮುರಿದು ಖದೀಮರು ಮದ್ಯ ಹಾಗೂ ಕ್ರೇಟ್​ಗಳನ್ನು ದೋಚಿದ್ದಾರೆ.

Liquor shop looted
ಮದ್ಯದಂಗಡಿ ಕಳ್ಳತನ

By

Published : Apr 4, 2020, 7:49 PM IST

ನವದೆಹಲಿ: ಮದ್ಯದಂಗಡಿಯ ಬಾಗಿಲು ಮುರಿದು ಅಪರಿಚಿತರು ಮದ್ಯದ ಬಾಟಲ್​ಗಳನ್ನು ಲೂಟಿ ಮಾಡಿ, ಎಸ್ಕೇಪ್​ ಆಗಿರುವ ಘಟನೆ ಉತ್ತರ ದೆಹಲಿಯ ರೊಶ್ನಾರಾ ರಸ್ತೆಯಲ್ಲಿ ನಡೆದಿದೆ.

ಲಾಕ್​ ಡೌನ್​ ಹಿನ್ನೆಲೆಯಲ್ಲಿ ಪೊಲೀಸರು ಗಸ್ತು ತಿರುಗುವ ಮದ್ಯದಂಗಡಿಯ ವೇಳೆ ವಿಷಯ ಗೊತ್ತಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು '' ವೈನ್​ಶಾಪ್​ನ ಶೆಟರ್​ ತೆರೆದು, ಕೆಲವು ಮದ್ಯದ ಬಾಟಲ್​ಗಳು ಹಾಗೂ ಕ್ರೇಟ್​ಗಳನ್ನು ಹೊತ್ತೊಯ್ಯಿದ್ದಾರೆ'' ಎಂದು ಸ್ಪಷ್ಟಪಡಿದ್ದಾರೆ. ಘಟನೆಯ ಸಂಬಂಧ ಸಬ್ಜಿ ಮಂಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ABOUT THE AUTHOR

...view details