ಕಾಸ್‌ಗಂಜ್ (ಉತ್ತರ ಪ್ರದೇಶ): ಕಾಸ್‌ಗಂಜ್‌ನಲ್ಲಿ ನಡೆಸುತ್ತಿದ್ದ ಅಕ್ರಮ ಮದ್ಯ ಕಾರ್ಖಾನೆಯೊಂದರ ಮೇಲೆ ದಾಳಿ ನಡೆಸಲು ಮುಂದಾಗಿದ್ದ ಸಬ್ ಇನ್ಸ್‌ಪೆಕ್ಟರ್ ಹಾಗೂ ಕಾನ್ಸ್ಟೇಬಲ್ ಮೇಲೆಯೇ ದಂಧೆಕೋರರು ಮರುದಾಳಿ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ. ಇನ್ನು ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಕಾನ್ಸ್ಟೇಬಲ್ ದೇವೇಂದ್ರ ಸಿಂಗ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮದ್ಯ ಮಾಫಿಯಾ ಕಿಂಗ್‌ಪಿನ್ ಮೋತಿ ಧೀಮರ್‌ಗೆ ವಾರಂಟ್ ಸಲ್ಲಿಸಲು ಸಿಧ್‌ಪುರದ ಪೊಲೀಸ್ ತಂಡ ನಾಗಲಾ ಧೀಮರ್ ಗ್ರಾಮಕ್ಕೆ ತೆರಳಿದೆ. ಈ ವೇಳೆ ದಾಳಿ ನಡೆಸಿದ ಮಾಫಿಯಾ ತಂಡವು ಸಬ್ ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ಮತ್ತು ಕಾನ್ಸ್ಟೇಬಲ್ ದೇವೇಂದ್ರ ಸಿಂಗ್ಗೆ ಈಟಿಯಿಂದ ದಾಳಿ ನಡೆಸಿದೆ ಎಂದು ಹೇಳಲಾಗಿದೆ.