ವಾರಣಾಸಿ: ಕಾಶಿ ವಿಜ್ಞಾನಿಯೊಬ್ಬ ಲಿಪ್ಸ್ಟಿಕ್ ಗನ್ ತಯಾರಿಸಿದ್ದು, ಈ ಮೂಲಕ ಶೂಟ್ ಮಾಡುವುದು ಮಾತ್ರವಲ್ಲದೇ ಪೊಲೀಸರಿಗೆ ನೇರವಾಗಿ ಕರೆ ಮಾಡುವ ಮೂಲಕ ಮಹಿಳೆಯರು ತಮ್ಮನ್ನು ರಕ್ಷಿಸಿಕೊಳ್ಳಬಹುದಾಗಿದೆ.
ಲಿಪ್ಸ್ಟಿಕ್ ಕೇವಲ ಸೌಂದರ್ಯವರ್ಧಕ ಮಾತ್ರವಲ್ಲ: ಮತ್ತೆ ಇನ್ನೇನು? ಈ ವಿಡಿಯೋ ನೋಡಿ! ಈ ಲಿಪ್ಸ್ಟಿಕ್ ಗನ್ ವಿನ್ಯಾಸಗೊಳಿಸಿರುವ ಯುವ ವಿಜ್ಞಾನಿ ಶ್ಯಾಮ್ ಚೌರಾಸಿಯಾ ಪ್ರಕಾರ, ಮಹಿಳೆಯರ ಸುರಕ್ಷತಾ ದೃಷ್ಟಿಯಿಂದ ಲಿಪ್ಸ್ಟಿಕ್ ಗನ್ ಮಾಡಲಾಗಿದ್ದು ಮಹಿಳೆಯರು ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು. ಇದರ ವಿಶೇಷತೆಯೆಂದರೆ ಲಿಪ್ಸ್ಟಿಕ್ ಒಳಭಾಗದಲ್ಲಿ ಗನ್ ಇದ್ದು ಯಾವುದೇ ತುರ್ತುಸಂದರ್ಭದಲ್ಲಿ ಆಕೆ ಪೊಲೀಸರಿಗೆ ಕರೆ ಮಾಡಬಹುದು. ಮಹಿಳೆ ಸಮಸ್ಯೆಯಲ್ಲಿದ್ದಾಗ ಕೇವಲ ಒಂದು ಬಟನ್ ಒತ್ತುವ ಮೂಲಕ ಪೊಲೀಸರನ್ನು ಸಂಪರ್ಕಿಸಬುದು ಎನ್ನುತ್ತಾರೆ ಈ ಯುವ ವಿಜ್ಞಾನಿ .
ಬಳಸುವ ವಿಧಾನ:
ನಿಮ್ಮ ಮೊಬೈಲ್ನಲ್ಲಿ 112 ಸಂಖ್ಯೆಗೆ ಲಾಸ್ಟ್ ಡಯಲ್ ಮಾಡಿಟ್ಟಿರಬೇಕು. ಯಾವುದೇ ತುರ್ತು ಸ್ಥಿತಿಯಲ್ಲಿ ಲಿಪ್‌ಸ್ಟಿಕ್‌ನಲ್ಲಿ ಸಣ್ಣ ಗುಂಡಿಯನ್ನು ಒತ್ತಿದ ಬಳಿಕ ಅದನ್ನು ಲಾಕ್ ಮಾಡಿ. ಕೂಡಲೇ ಅದು ನಮ್ಮ ಮೊಬೈಲ್ ಮೂಲಕ ಪೊಲೀಸ್ ನಿಯಂತ್ರಣ ಕೊಠಡಿಗೆ ಸಂಪರ್ಕಿಸುತ್ತದೆ.
ಅಷ್ಟೇ ಅಲ್ಲದೇ, ಈ ಗನ್ನ ಶಬ್ಧ ಸುಮಾರು ಒಂದು ಕಿ.ಮೀ ವಿಸ್ತೀರ್ಣದವರೆಗೂ ಕೇಳಿಸಲಿದ್ದು, ಸುತ್ತಮುತ್ತಲಿರುವ ಜನರು ಸಹಾಯಕ್ಕಾಗಿ ಸುಲಭವಾಗಿ ತಲುಪಬಹುದು. ಇದು ಸಂಪೂರ್ಣವಾಗಿ ಬ್ಲೂಟೂತ್ಗೆ ಸಂಪರ್ಕ ಹೊಂದಿದ್ದು, ಚಾರ್ಜ್ ಮಾಡಿ ಬಳಸಲಾಗುವುದು. ಇದರ ಬೆಲೆ ಸರಿ-ಸುಮಾರು 500 ರಿಂದ 600 ಇರಲಿದ್ದು ಮಹಿಳೆಯರು ಸದುಪಯೋಗಪಡಿಸಿಕೊಳ್ಳಬಹುದಾಗಿದೆಯಂತೆ.