ಜೈಪುರ : ಗುಜರಾತ್ ಜುನಾಗಡದ ಶಕರ್ಬಾಗ್ ಮೃಗಾಲಯದಿಂದ ಏಷ್ಯಾಟಿಕ್ ಸಿಂಹಿಣಿ 'ಸೃಷ್ಟಿ'ಯನ್ನುಜಿಲ್ಲೆಯ ನಹರ್ಗಡ ಜೈವಿಕ ಉದ್ಯಾನವನಕ್ಕೆ ಕರೆತರಲಾಗುತ್ತಿದೆ. ಬುಧವಾರ ರಾತ್ರಿಯ ವೇಳೆ ಉದ್ಯಾನ ತಲುಪುವ ಸಾಧ್ಯತೆಯಿದೆ.
ಶಕರ್ಬಾಗ್ ಮೃಗಾಲಯದಲ್ಲಿದ್ದ ಏಕೈಕ ಏಷ್ಯಾಟಿಕ್ ಸಿಂಹಿಣಿ 'ತೇಜಿಕ' ಕಳೆದ ವರ್ಷ ಎರಡು ಮರಿಗಳಿಗೆ ಜನ್ಮ ನೀಡಿದ ಬಳಿಕ ಮೃತಪಟ್ಟಿತ್ತು. ಹೀಗಾಗಿ, ಎರಡು ಸಿಂಹದ ಮರಿಗಳನ್ನು ನಹರ್ಗಡಕ್ಕೆ ಸ್ಥಳಾಂತರಿಸಲಾಗ್ತಿದೆ. ಇಲ್ಲಿ, ತ್ರಿಪುರ ಸಿಂಹಿಣಿ ಜೊತೆ ಸೃಷ್ಟಿ ಸೇರಿಕೊಳ್ಳಲಿದೆ.