ಗುಜರಾತ್:ಭಾವನಗರದ ಪಾಲಿಟಾನಾ ಪಂತ್ ಸಿಂಹಗಳ ಆವಾಸಸ್ಥಾನವಾಗಿದೆ. ಇಲ್ಲಿನ ಘೆಟಿ ಗ್ರಾಮದ ಫೆನ್ಸಿಂಗ್ ಪ್ರದೇಶದ ಮುಳ್ಳುಗಂಟಿಗಳಲ್ಲಿ ಸಿಂಹವೊಂದು ಸಿಕ್ಕಿಬಿದ್ದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು. ಕೂಡಲೇ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಸಿಬ್ಬಂದಿ, ಒಂದು ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಸಿಂಹವನ್ನು ರಕ್ಷಿಸಿದರು.
ಮುಳ್ಳುಗಂಟಿಗಳಲ್ಲಿ ಸಿಲುಕಿದ ಕಾಡಿನ ರಾಜ: ಅರಣ್ಯಾಧಿಕಾರಿಗಳಿಂದ ಸಿಂಹದ ರಕ್ಷಣೆ - ಅರಣ್ಯಾಧಿಕಾರಿಗಳಿಂದ ಸಿಂಹದ ರಕ್ಷಣೆ
ಮುಳ್ಳುಗಂಟಿಗಳ ಪೊದೆಯಲ್ಲಿ ಸಿಂಹ ಸಿಲುಕಿಕೊಂಡಿದ್ದು, ಸ್ಥಳೀಯರು ಆತಂಕಕ್ಕೊಳಗಾದ ಘಟನೆ ಗುಜರಾತ್ನ ಭಾವನಗರದಲ್ಲಿ ನಡೆದಿದೆ.
ಅರಣ್ಯಾಧಿಕಾರಿಗಳಿಂದ ಸಿಂಹದ ರಕ್ಷಣೆ
ದಿನೇ ದಿನೆ ಈ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗ್ತಿದೆ. ಅದ್ರಲ್ಲೂ ಸಿಂಹಗಳ ಕಾಟ ಹೆಚ್ಚುತ್ತಿದ್ದು, ಜನರು ಭೀತಿಯಿಂದ ಬದುಕು ಸಾಗಿಸುವಂತಾಗಿದೆ. ಹಾಗಾಗಿ ಕಾಡು ಪ್ರಾಣಿಗಳ ನಿಗ್ರಹಕ್ಕೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಜನತೆ ಅರಣ್ಯಾಧಿಕಾರಿಗಳಲ್ಲಿ ಮನವಿ ಮಾಡಿದರು.