ಲೋಕಸಭಾ ಚುನಾವಣೆ ಹತ್ತಿರ ಬಂದಿದೆ. ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಮೈಯ್ಯೆಲ್ಲಾ ಕಣ್ಣಾಗಿರಬೇಕು. ನೀತಿ ಸಂಹಿತೆ ಜಾರಿ ಇರುವ ಈ ದಿನಗಳಲ್ಲಿ ಅಭ್ಯರ್ಥಿಗಳ ಜಾಲತಾಣ ಬಳಕೆಗೆ ಇರುವ ಮಿತಿಗಳೇನು ಇಲ್ಲಿದೆ ಫುಲ್ ಡೀಟೇಲ್ಸ್.
*ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿಗಳು ಅವರ ಫೇಸ್ಬುಕ್, ಟ್ವಿಟರ್ ಖಾತೆಗಳ ವಿವರವನ್ನು ಚುನಾವಣಾ ಆಯೋಗಕ್ಕೆ ನೀಡಬೇಕು
* ಫೇಸ್ಬುಕ್, ಟ್ವಿಟರ್ನಲ್ಲಿ ಪೋಸ್ಟ್ ಮಾಡುವ ಜಾಹೀರಾತುಗಳಿಗೆ ಮುಂಚಿತವಾಗಿ ಇಸಿಯಿಂದ ಪ್ರಮಾಣೀಕೃತವಾಗಿರಬೇಕು.
* ಇಸಿ ಪ್ರಮಾಣೀಕೃತಗೊಳಿಸದ ಜಾಹೀರಾತುಗಳನ್ನು ಟ್ವಿಟರ್, ಫೇಸ್ಬುಕ್, ಗೂಗಲ್, ಯೂಟ್ಯೂಬ್ನಲ್ಲಿ ಯಾರೂ ಪ್ರಕಟಿಸುವಂತಿಲ್ಲ.