ನವದೆಹಲಿ :ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಈವರೆಗೆ 47,000ಕ್ಕೂ ಅಧಿಕ ಜನ ಬಲಿಯಾಗಿದ್ದಾರೆ. 9,37,000ಕ್ಕೂ ಹೆಚ್ಚು ಜನರಲ್ಲಿ ಪಾಸಿಟಿವ್ ಲಕ್ಷಣ ಕಂಡು ಬಂದಿವೆ. ಸೋಂಕಿನ ನಿರ್ಣಾಯಕ ಹಂತದಲ್ಲಿ ಎಲ್ಲ ಸಂಶೋಧಕರು ಹಾಗೂ ವಿಶ್ವ ನಾಯಕರು ಜಗತ್ತನ್ನು ಸ್ಥಗಿತಗೊಳಿಸಿ ಭುಜಕ್ಕೆ ಭುಜಕೊಟ್ಟು ಕೆಲಸ ಮಾಡಬೇಕಾಗಿದೆ ಎಂದು ಅಂತಾರಾಷ್ಟ್ರೀಯ ಸಾಪ್ತಾಹಿಕ ಜರ್ನಲ್ ನೇಚರ್ ಎಚ್ಚರಿಸಿದೆ.
ಕೊರೊನಾ ದುಷ್ಕೃತ್ಯ ಹೆಡೆಮುರಿ ಕಟ್ಟಲು ಜಾಗತಿಕ ಸಂಶೋಧಕರು, ನಾಯಕರು ಒಗ್ಗೂಡಲಿ.. - ವಿಶ್ವ ನಾಯಕರು
ಸಂಶೋಧನೆಗೆ ಸಂಬಂಧಿಸಿದ ಕಾರ್ಯಗಳಿಗಾಗಿ ಸ್ವಯಂಸೇವಕರನ್ನು ಸೆಳೆಯಲು ಸಂಶೋಧಕರೇ ಸ್ಥಾಪಿಸಿದ ಕ್ರೌಡ್‌ಫೈಟ್ ಕೋವಿಡ್-19 ಹೆಸರಿನ ಆನ್‌ಲೈನ್ ಫ್ಲ್ಯಾಟ್‌ಫಾರ್ಮ್ ಜನಪ್ರಿಯತೆ ಗಳಿಸುತ್ತಿದೆ.
ಸಂಶೋಧಕರು ನಡೆಸುತ್ತಿರುವ ಲಸಿಕೆ ಪತ್ತೆ ಹಚ್ಚುತ್ತಿರುವ ಕಾರ್ಯವನ್ನು ಜರ್ನಲ್ ಶ್ಲಾಘಿಸಿದೆ. ವಾರಪೂರ್ತಿ ವಿಶ್ವದಾದ್ಯಂತ ಹತ್ತಾರು ಸಂಶೋಧಕರು ಮುಂದೆ ಬಂದಿದ್ದಾರೆ. ಸಾವಿರಾರು ಜೀವ ತೆಗೆದುಕೊಳ್ಳುವ ವೈರಸ್‌ಗೆ ಶಾಶ್ವತ ಪರಿಹಾರ ನೀಡಲು ತಮ್ಮ ಸಮಯ ವಿನಿಯೋಗಿಸಿ ಮತ್ತು ಆಲೋಚನೆಗಳಲ್ಲಿ ಮುಳುಗಿದ್ದಾರೆ ಎಂದಿದೆ. ಆದರೆ, ವಿವಿಧ ದೇಶಗಳ ಪ್ರಧಾನ ಮಂತ್ರಿಗಳು ಮತ್ತು ಅಧ್ಯಕ್ಷರು ಈ ಬಗ್ಗೆ ಗಂಭೀರ ಗಮನ ಹರಿಸಿಲ್ಲ ಎಂದು ವರದಿ ಆರೋಪಿಸಿದೆ. 2008ರ ಆರ್ಥಿಕ ಬಿಕ್ಕಟ್ಟಿಗೆ ಜಾಗತಿಕ ನಾಯಕರು ಪ್ರತಿಕ್ರಿಯಿಸಿದ ರೀತಿಯಲ್ಲಿ ಮತ್ತೊಮ್ಮೆ ಸಾಂಕ್ರಾಮಿಕ ರೋಗಕ್ಕೆ ಸ್ಪಂದಿಸಬೇಕಿದೆ ಎಂದು ವರದಿ ತಿಳಿಸಿದೆ.
ವರದಿಯು ಕೋವಿಡ್-19 ಪರೀಕ್ಷೆಗಳನ್ನು ನಡೆಸುತ್ತಿರುವ ಕೇಂಬ್ರಿಡ್ಜ್, ಮ್ಯಾಸಚೂಸೆಟ್ಸ್‌ನ ಬ್ರಾಡ್ ಇನ್‌ಸ್ಟಿಟ್ಯೂಟ್ ಆಫ್ ಎಂಐಟಿ, ಬೊಗೋಟಾದ ನ್ಯಾಷನಲ್ ಯೂನಿವರ್ಸಿಟಿ ಆಫ್ ಕೊಲಂಬಿಯಾ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯವನ್ನು ಶ್ಲಾಘಿಸಿದೆ. ಸಂಶೋಧನೆಗೆ ಸಂಬಂಧಿಸಿದ ಕಾರ್ಯಗಳಿಗಾಗಿ ಸ್ವಯಂಸೇವಕರನ್ನು ಸೆಳೆಯಲು ಸಂಶೋಧಕರೇ ಸ್ಥಾಪಿಸಿದ ಕ್ರೌಡ್‌ಫೈಟ್ ಕೋವಿಡ್-19 ಹೆಸರಿನ ಆನ್‌ಲೈನ್ ಫ್ಲ್ಯಾಟ್‌ಫಾರ್ಮ್ ಜನಪ್ರಿಯತೆ ಗಳಿಸುತ್ತಿದೆ. ಈವರೆಗೆ ಇದು 35,000ಕ್ಕೂ ಹೆಚ್ಚು ಸ್ವಯಂಸೇವಕರನ್ನ ಇದರಲ್ಲಿ ನೋಂದಣಿ ಮಾಡಿಕೊಳ್ಳಲಾಗಿದೆ.