ಕರ್ನಾಟಕ

karnataka

ETV Bharat / bharat

ದೆಹಲಿಯ 57 ವೈದ್ಯಕೀಯ ಸಿಬ್ಬಂದಿಯಲ್ಲಿ ಕೊರೊನಾ ದೃಢ! - ದೆಹಲಿಯ 57 ವೈದ್ಯಕೀಯ ಸಿಬ್ಬಂದಿಗಳಲ್ಲಿ ಕೊರೊನಾ

ನವದೆಹಲಿಯ ಬಾಬು ಜಗಜೀವನ್ ರಾಮ್ ಸ್ಮಾರಕ ಆಸ್ಪತ್ರೆಯ 57 ಉದ್ಯೋಗಿಗಳು ಮತ್ತು ಅವರ ಸಂಬಂಧಿಕರಲ್ಲಿ ಕೊರೊನಾ ದೃಢಪಟ್ಟಿದೆ.

ಕೊರೊನಾ ದೃಢ
ಕೊರೊನಾ ದೃಢ

By

Published : Apr 26, 2020, 8:47 PM IST

ನವದೆಹಲಿ: ಇಲ್ಲಿನ ಬಾಬು ಜಗಜೀವನ್ ರಾಮ್ ಸ್ಮಾರಕ ಆಸ್ಪತ್ರೆಯ ವೈದ್ಯರು ಮತ್ತು ದಾದಿಯರು ಸೇರಿದಂತೆ 57 ಉದ್ಯೋಗಿಗಳ ಕೊರೊನಾ ವೈರಸ್ ವರದಿ ಪಾಸಿಟಿವ್​ ಬಂದಿದೆ. ಅವರಲ್ಲಿ ಶೇ. 70ರಷ್ಟು ಮಂದಿಗೆ ಸೋಂಕಿನ ಲಕ್ಷಣಗಳಿಲ್ಲ ಎಂದು ತಿಳಿದು ಬಂದಿದೆ.

ಓರ್ವ ವೈದ್ಯರು ಮತ್ತು ದಾದಿಯ ಕುಟುಂಬ ಸದಸ್ಯರು ಸಹ ಕೊರೊನಾ ಸೋಂಕಿಗೆ ಒಳಗಾಗಿರುವುದು ದೃಢಪಟ್ಟಿದೆ. ಕುಟುಂಬ ಸದಸ್ಯರು ಮತ್ತು ಅವರ ಜತೆ ನಿಕಟ ಸಂಪರ್ಕ ಹೊಂದಿರುವವರನ್ನು ಪರೀಕ್ಷಿಸುವ ಪ್ರಕ್ರಿಯೆ ಮುಂದುವರೆದಿದೆ. ಇಲ್ಲಿಯವರೆಗೆ 57ಕ್ಕೂ ಹೆಚ್ಚು ಸಿಬ್ಬಂದಿ ಮತ್ತು ಅವರ ಕೆಲವು ಸಂಬಂಧಿಕರ ವರದಿ ಪಾಸಿಟಿವ್​ ಬಂದಿದೆ. ಅವರಲ್ಲಿ ಸುಮಾರು 70 ಪ್ರತಿಶತದಷ್ಟು ಜನರು ಕೊರೊನಾ ಲಕ್ಷಣ ರಹಿತರಾಗಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

100 ಹಾಸಿಗೆಗಳ ಆಸ್ಪತ್ರೆಯಲ್ಲಿ ವೈದ್ಯರು, ಪ್ಯಾರಾ ಮೆಡಿಕ್ಸ್​, ದಾದಿಯರು, ನೈರ್ಮಲ್ಯ ಕಾರ್ಮಿಕರು, ಭದ್ರತೆ ಮತ್ತು ವೈದ್ಯಕೀಯೇತರ ಸಿಬ್ಬಂದಿ ಸೇರಿದಂತೆ ಸುಮಾರು 500 ಉದ್ಯೋಗಿಗಳಿದ್ದಾರೆ.

ಶನಿವಾರದವರೆಗೆ 40 ಉದ್ಯೋಗಿಗಳಲ್ಲಿ ಕೊರೊನಾ ದೃಢಪಟ್ಟಿದೆ. 114 ಉದ್ಯೋಗಿಗಳು ಮತ್ತು ಅವರ ಸಂಬಂಧಿಕರ ಮಾದರಿ ಪರೀಕ್ಷೆ ನಡೆಸಲಾಗಿದ್ದು, 20 ಜನರ ವರದಿಗಳು ಪಾಸಿಟಿವ್​ ಬಂದಿವೆ. ಸುಮಾರು 70 ಸಿಬ್ಬಂದಿಯ ವರದಿಗಳು ಇನ್ನೂ ಬರಬೇಕಿದೆ.

ಆಸ್ಪತ್ರೆಯಲ್ಲಿ ಫ್ಲೂ ಕಾರ್ನರ್ ಇದೆ ಮತ್ತು ಆಡಳಿತವು ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳನ್ನು ಫಿಲ್ಟರ್ ಮಾಡುತ್ತಿದೆ. ಆದರೆ ಹೆಚ್ಚಿನವರಲ್ಲಿ ಯಾವುದೇ ಲಕ್ಷಣಗಳು ಕಂಡುಬರದೇ ವರದಿ ಪಾಸಿಟಿವ್​ ಬಂದಿರುವುದು ಅಚ್ಚರಿಗೆ ಕಾರಣವಾಗಿದೆ.

ಸೋಂಕಿನ ಮೂಲವನ್ನು ಹೇಳುವುದು ಕಷ್ಟ. ನಾವು ಥರ್ಮಲ್ ಸ್ಕ್ರೀನಿಂಗ್ ಮಾಡುತ್ತಿದ್ದೇವೆ ಮತ್ತು ಬರುವ ರೋಗಿಗಳನ್ನು ಪ್ರಯಾಣದ ಇತಿಹಾಸ ಅಥವಾ ರೋಗಲಕ್ಷಣಗಳ ಬಗ್ಗೆ ಕೇಳುತ್ತಿದ್ದೆವು. ಆದರೆ ಯಾರಾದರೂ ಲಕ್ಷಣ ರಹಿತರಾಗಿದ್ದರೆ ನಾವು ಏನೂ ಮಾಡಲಾಗುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಜಹಾಂಗೀರ್‌ಪುರಿಯಲ್ಲಿರುವ ಆಸ್ಪತ್ರೆಯು ಹಲವಾರು ಹಾಟ್‌ಸ್ಪಾಟ್‌ಗಳಿಂದ ಆವೃತವಾಗಿದೆ. ಜಹಾಂಗೀರ್‌ಪುರಿಯ ಬಹುತೇಕ ಎಲ್ಲಾ ಬ್ಲಾಕ್‌ಗಳಲ್ಲಿ ಕಂಟೈನ್‌ಮೆಂಟ್ ವಲಯಗಳಿವೆ. ಇದನ್ನು ನಿರ್ಲಕ್ಷಿಸಲಾಗುವುದಿಲ್ಲ. ಅನೇಕ ಉದ್ಯೋಗಿಗಳು ಹತ್ತಿರದಲ್ಲೇ ವಾಸಿಸುತ್ತಿದ್ದಾರೆ. ಕೋವಿಡ್ ಅಲ್ಲದ ಆಸ್ಪತ್ರೆಗಳ ವೈದ್ಯಕೀಯ ವೃತ್ತಿಪರರಿಗೆ ಯಾವುದೇ ವಸತಿ ಇಲ್ಲ. ಇದು ಅವರ ಕುಟುಂಬ ಸದಸ್ಯರ ಪ್ರಾಣವನ್ನೂ ಅಪಾಯಕ್ಕೆ ದೂಡುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ವೈದ್ಯಕೀಯ ವೃತ್ತಿಪರರಿಗೆ ಸಾಕಷ್ಟು ಪಿಪಿಇ ಕಿಟ್‌ಗಳು, ಮಾಸ್ಕ್​ಗಳು ಮತ್ತು ಕೈಗವಸುಗಳನ್ನು ಒದಗಿಸಲಾಗಿದೆ ಎಂದು ಆಸ್ಪತ್ರೆಯ ಅಧಿಕಾರಿ ತಿಳಿಸಿದ್ದಾರೆ.

ಜನರು ಆಸ್ಪತ್ರೆಗೆ ಹಲವಾರು ಸಮಸ್ಯೆಗಳೊಂದಿಗೆ ಬರುತ್ತಿದ್ದಾರೆ. ಕೆಲವರು ಸೋಂಕನ್ನು ಹೊತ್ತುಕೊಂಡು ಹೋಗಬಹುದು. ನಾವು ಸರ್ಕಾರದ ಎಲ್ಲಾ ನಿರ್ದೇಶನಗಳನ್ನು ಅನುಸರಿಸುತ್ತಿದ್ದೇವೆ. ವೈದ್ಯರು ರೋಗಿಗಳಿಗೆ ಬೇಡವೆಂದು ಹೇಳಲು ಸಾಧ್ಯವಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಗರದಾದ್ಯಂತ ಸುಮಾರು 150 ಆಸ್ಪತ್ರೆ ನೌಕರರು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಹೆಚ್ಚಿನವರು ಲಕ್ಷಣ ರಹಿತರಾಗಿದ್ದಾರೆ. ದೆಹಲಿಯಲ್ಲಿ ಸುಮಾರು 2,650 ಕೋವಿಡ್​-19 ಪ್ರಕರಣಗಳು ಕಂಡುಬಂದಿವೆ. ಅಲ್ಲದೆ 54 ಬಂದಿ ಬಲಿಯಾಗಿದ್ದಾರೆ.

ABOUT THE AUTHOR

...view details