ಪಾಟ್ನಾ (ಬಿಹಾರ):ಬಿಹಾರದಾದ್ಯಂತ ಮಿಂಚಿನಿಂದ ಕನಿಷ್ಠ 13 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐದು ಜಿಲ್ಲೆಗಳಲ್ಲಿ 13 ಜನ ಮೃತಪಟ್ಟಿದ್ದು, ವೈಶಾಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ ಐದು ಸಾವು ಸಂಭವಿಸಿದೆ ಎಂದು ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ.
ಲಖಿಸರೈನಲ್ಲಿ 2, ಗಯಾ, ಬಂಕಾ, ಸಮಸ್ತಿಪುರ, ನಳಂದ ಮತ್ತು ಜಮುಯಿ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ಇಲಾಖೆ ತಿಳಿಸಿದೆ.
ಈ ಕುರಿತು ಶೋಕ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್, ಪ್ರತಿ ಮೃತ ವ್ಯಕ್ತಿಯ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಜೊತೆಗ ಹವಾಮಾನ ಕೆಟ್ಟದಾಗಿದ್ದರೆ ಜನ ಮನೆಯೊಳಗೆ ಇರಬೇಕೆಂದು ಸಿಎಂ ಮನವಿ ಮಾಡಿದ್ದಾರೆ.
ಬಿಹಾರದಲ್ಲಿ ಕಳೆದೆರಡು ವಾರಗಳಿಂದ ಸಿಡಿಲು ಗುಡುಗಿನಿಂದ ನೂರಾರು ಜನ ಬಲಿಯಾಗಿದ್ದಾರೆ. ಕೊರೊನಾಕ್ಕಿಂತ ಬಿಹಾರದಲ್ಲಿ ಈ ಗುಡುಗು ಸಿಡಿಲಿಗೆ ಬಲಿಯಾದವರೇ ಜಾಸ್ತಿ ಆಗಿದ್ದಾರೆ.
ಕೆಲ ದಿನಗಳ ಹಿಂದೆ ಒಂದೇ ದಿನ 83 ಮಂದಿ ಬಿಹಾರದಲ್ಲಿ ಸಿಡಿಲಿಗೆ ಬಲಿಯಾಗಿದ್ದರು.