ಬಿಹಾರ:ರಾಜ್ಯಾದ್ಯಂತ ಸಿಡಿಲಿನ ಅಬ್ಬರಕ್ಕೆ ಬುಧವಾರ ಒಂದೇ ದಿನ 12 ಜನರು ಬಲಿಯಾಗಿದ್ದು, ಮೃತರ ಕುಟುಂಬಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ 4 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಬೆಗುಸರೈ, ಭಾಗಲ್ಪುರ್, ಬಂಕಾ, ಮುಂಗರ್, ಕೈಮೂರ್ ಮತ್ತು ಜಮುಯಿ - ಈ ಆರು ಜಿಲ್ಲೆಗಳಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ. ಇಂತಹ ಅಪಾಯಕಾರಿ ವಾತಾವರಣದಲ್ಲಿ ಜನರು ಜಾಗರೂಕತೆಯಿಂದ ಇರಬೇಕೆಂದು ಮನವಿ ಮಾಡುತ್ತೇನೆ. ವಿಪತ್ತು ನಿರ್ವಹಣಾ ಪ್ರಾಧಿಕಾರ ನೀಡಿರುವ ಸಲಹೆಗಳನ್ನು ಅನುಸರಿಸಿ ಮನೆಯೊಳಗೆ ಸುರಕ್ಷಿತವಾಗಿರಿ ಎಂದು ಸಿಎಂ ನಿತೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.