ಕರ್ನಾಟಕ

karnataka

ETV Bharat / bharat

ರಾಜಧಾನಿಯಲ್ಲಿ ದಿಢೀರ್​ ಮಳೆ: ತಾಪಮಾನದಲ್ಲಿ ತುಸು ಏರಿಕೆ... - ದೆಹಲಿ ಗುಡುಗು ಸಹಿತ ಮಳೆ

light-rains-in-delhi
ಮಳೆಯಲ್ಲಿಯೇ ವಾಹನ ಸಂಚಾರ

By

Published : Jan 7, 2020, 2:02 PM IST

ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಮವಾರ ಸಂಜೆ ದಿಢೀರ್​ ಮಳೆಯಾಗಿದೆ. ಮುಂದಿನ 24 ಗಂಟೆಗಳಲ್ಲಿ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಳೆಯಲ್ಲಿಯೇ ವಾಹನ ಸಂಚಾರ

ನಗರದಲ್ಲಿ ಮೋಡ ಕವಿದ ವಾತಾವರಣದಿಂದ ಕನಿಷ್ಠ ತಾಪಮಾನ ಸ್ವಲ್ಪ ಹೆಚ್ಚಾಗಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಗರಿಷ್ಠ ತಾಪಮಾನ 19.1 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 9.9 ಡಿಗ್ರಿ ಸೆಲ್ಸಿಯಸ್​ ದಾಖಲಾಗಿದೆ. ಸಾಮಾನ್ಯಕ್ಕಿಂತ ಮೂರು ಪಟ್ಟು ತಾಪಮಾನ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದು ತೀವ್ರ ಚಳಿಯಿಂದ ಕಂಗೆಟ್ಟಿದ್ದ ರಾಜಧಾನಿ ಮಂದಿಗೆ ತುಸು ನೆಮ್ಮದಿ ತಂದಿದೆ.

ಜನವರಿ 7ರಿಂದ 9ರವರೆಗೆ ಉತ್ತರ ಭಾರತದಲ್ಲಿ ಮಳೆಯಾಗುವ ನಿರೀಕ್ಷೆಯಿದ್ದು, ದೆಹಲಿಯಲ್ಲಿ ಕನಿಷ್ಠ ತಾಪಮಾನ 5 ರಿಂದ 6 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಬಹುದು ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.ಇನ್ನೂ ಮಂಗಳವಾರ ಲಘು ಮಳೆ, ಗುಡುಗು ಸಹಿತ ಆಲಿಕಲ್ಲು ಮಳೆ ಬರುವ ಸಾಧ್ಯತೆ ಇದೆ. 20-25 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ABOUT THE AUTHOR

...view details