ಕರ್ನಾಟಕ

karnataka

ETV Bharat / bharat

ಜೀವರಕ್ಷಕ ಔಷಧಿಗಳು ಮೊದಲು ಭಾರತೀಯರಿಗೆ ಮೀಸಲಿರಲಿ: ರಾಹುಲ್ ಗಾಂಧಿ - ಅಮೆರಿಕ

ಇತರ ಎಲ್ಲಾ ರಾಷ್ಟ್ರಗಳಿಗೆ ನೆರವು ನೀಡಲಿ, ಆದರೆ ಜೀವರಕ್ಷಕ ಔಷಧಿಗಳು ಭಾರತೀಯರಿಗೆ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುವಂತೆ ನೋಡಿಕೊಳ್ಳುವುದು ಮುಖ್ಯ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಅಂತಾರಾಷ್ಟ್ರೀಯ ಸಮುದಾಯಕ್ಕೆ ನೀಡಿದ ವಾಗ್ದಾನದಂತೆ ಭಾರತವೀಗ ಮಲೇರಿಯಾ ನಿರೋಧಕ ಹೈಡ್ರಾಕ್ಸಿಕ್ಲೋರೊಕ್ವಿನ್​ ಔಷಧಿಯನ್ನು ಹಲವಾರು ರಾಷ್ಟ್ರಗಳಿಗೆ ರಫ್ತು ಮಾಡಲು ಮುಂದಾದ ಬೆನ್ನಲ್ಲೇ ರಾಹುಲ್ ಗಾಂಧಿ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ರಾಹುಲ್ ಗಾಂಧಿ
ರಾಹುಲ್ ಗಾಂಧಿ

By

Published : Apr 7, 2020, 5:10 PM IST

ಹೊಸದಿಲ್ಲಿ: ಕೊರೊನಾ ವೈರಸ್​ ವಿರುದ್ಧದ ಹೋರಾಟದಲ್ಲಿ ಭಾರತ ಇತರ ಎಲ್ಲಾ ರಾಷ್ಟ್ರಗಳಿಗೆ ನೆರವು ನೀಡಲಿ. ಆದರೆ ಜೀವರಕ್ಷಕ ಔಷಧಿಗಳು ಭಾರತೀಯರಿಗೆ ಮೊದಲು ಆದ್ಯತೆಯ ಮೇರೆಗೆ ಸಿಗುವಂತಾಗಲಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

"ಪ್ರತೀಕಾರದ ಭಾವನೆಯಿಂದ ಗೆಳೆತನ ಬೆಳೆಯಲಾರದು. ಭಾರತ ವಿಶ್ವದ ಯಾವುದೇ ರಾಷ್ಟ್ರಕ್ಕೆ ಅಗತ್ಯ ನೆರವು ನೀಡಲಿ. ಆದರೆ ಜೀವರಕ್ಷಕ ಔಷಧಿಗಳು ಭಾರತೀಯರಿಗೆ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುವಂತೆ ನೋಡಿಕೊಳ್ಳುವುದು ಮುಖ್ಯ." ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಕೊರೊನಾ ವೈರಸ್​ ವಿರುದ್ಧದ ಜಾಗತಿಕ ಹೋರಾಟದಲ್ಲಿ ಕೈಜೋಡಿಸುವುದಾಗಿ ಅಂತಾರಾಷ್ಟ್ರೀಯ ಸಮುದಾಯಕ್ಕೆ ನೀಡಿದ ವಾಗ್ದಾನದಂತೆ ಭಾರತವೀಗ ಮಲೇರಿಯಾ ನಿರೋಧಕ ಹೈಡ್ರಾಕ್ಸಿಕ್ಲೋರೊಕ್ವಿನ್​ ಔಷಧಿಯನ್ನು ಹಲವಾರು ರಾಷ್ಟ್ರಗಳಿಗೆ ರಫ್ತು ಮಾಡಲು ಮುಂದಾದ ಬೆನ್ನಲ್ಲೇ ರಾಹುಲ್ ಗಾಂಧಿ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಅಗ್ಗ ದರದ ಔಷಧಿಯಾಗಿರುವ ಹೈಡ್ರಾಕ್ಸಿಕ್ಲೋರೊಕ್ವಿನ್​ ಔಷಧಿಯನ್ನು ಮಲೇರಿಯಾ ನಿವಾರಣೆಗಾಗಿ ದಶಕಗಳಿಂದ ಉಪಯೋಗಿಸಲಾಗುತ್ತಿದೆ. ಕೋವಿಡ್​-19 ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೊಕ್ವಿನ್ ಪರಿಣಾಮಕಾರಿಯಾಗಿದೆ ಎಂದು ಸಂಶೋಧನೆಗಳು ದೃಢಪಡಿಸಿದ ನಂತರ ಭಾರತ ಇದರ ರಫ್ತಿಗೆ ಕಡಿವಾಣ ಹಾಕಿತ್ತು. ಅಮೆರಿಕ ಸೇರಿದಂತೆ ಶ್ರೀಲಂಕಾ, ನೇಪಾಳ ಹಾಗೂ ಇನ್ನೂ ಕೆಲ ರಾಷ್ಟ್ರಗಳು ಹೈಡ್ರಾಕ್ಸಿಕ್ಲೋರೊಕ್ವಿನ್ ಪೂರೈಸುವಂತೆ ಭಾರತಕ್ಕೆ ಕೇಳಿಕೊಂಡಿವೆ.

ABOUT THE AUTHOR

...view details