ನವದೆಹಲಿ:ದೇಶದ ಸ್ವಾತಂತ್ರ್ಯೋತ್ಸವ ದಿನವಾದ ಆಗಸ್ಟ್ 15ರಂದು ದೆಹಲಿಯ ಐತಿಹಾಸಿಕ ಕೆಂಪು ಕೋಟೆಯ ಮೇಲೆ ಧ್ವಜಾರೋಹಣ ನೆರವೇರಿಸಿ ದೇಶವನ್ನು ಉದ್ದೇಶಿ ಮಾತನಾಡಲು 'ಅಮೂಲ್ಯವಾದ ಸಲಹೆಗಳು'ಅನ್ನು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟ್ಟರ್ ಮೂಲಕ ಮನವಿ ಮಾಡಿದ್ದಾರೆ.
ಸ್ವಾತಂತ್ರ್ಯೋತ್ಸವ ಭಾಷಣಕ್ಕೆ ಐಡಿಯಾಗಳನ್ನು ಕೊಡಿ: ಶ್ರೀಸಾಮಾನ್ಯರಿಗೆ ಮೋದಿ ಕೋರಿಕೆ -
'ಆಗಸ್ಟ್ 15ರಂದು ನನ್ನ ಭಾಷಣಕ್ಕಾಗಿ ನಿಮ್ಮ ಅಮೂಲ್ಯವಾದ ಸಲಹೆಗಳನ್ನು ಹಂಚಿಕೊಳ್ಳಲು ನಿಮ್ಮೆಲ್ಲರನ್ನು ಆಹ್ವಾನಿಸಲು ನನಗೆ ಸಂತೋಷವಾಗಿದೆ. ನಿಮ್ಮ ಆಲೋಚನೆಗಳು (ಐಡಿಯಾಗಳು) ಕೆಂಪು ಕೋಟೆಯ ಮೇಲಿಂದ 130 ಕೋಟಿ ಭಾರತೀಯರು ಕೇಳಿಸಿಕೊಳ್ಳಲಿ' ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಪಿಎಂ ಮೋದಿ
'ಆಗಸ್ಟ್ 15ರಂದು ನನ್ನ ಭಾಷಣಕ್ಕಾಗಿ ನಿಮ್ಮ ಅಮೂಲ್ಯವಾದ ಸಲಹೆಗಳನ್ನು ಹಂಚಿಕೊಳ್ಳಲು ನಿಮ್ಮೆಲ್ಲರನ್ನು ಆಹ್ವಾನಿಸಲು ನನಗೆ ಸಂತೋಷವಾಗಿದೆ. ನಿಮ್ಮ ಆಲೋಚನೆ(ಐಡಿಯಾಗಳು)ಗಳನ್ನು ಕೆಂಪು ಕೋಟೆಯ ಮೇಲಿಂದ 130 ಕೋಟಿ ಭಾರತೀಯರು ಕೇಳಿಸಿಕೊಳ್ಳಲಿ' ಎಂದು ಟ್ವೀಟಿಸಿದ್ದಾರೆ.
ಟ್ವೀಟ್ ಮಾಡಿದ ಮರುಕ್ಷಣವೇ ಪ್ರತಿಕ್ರಿಯೆಗಳ ಸುರಿಮಳೆ ಬಂದಿವೆ. ಇದುವರೆಗೂ 2,700 ಜನ ತಮ್ಮ ಸಲಹೆಗಳನ್ನು ಹಂಚಿಕೊಂಡಿದ್ದು, 3,700 ಜನ ಮರು ಟ್ವೀಟ್ ಮಾಡಿದ್ದಾರೆ. 20 ಸಾವಿರ ಜನ ಲೈಕ್ ಮಾಡಿದ್ದಾರೆ.