ಕರ್ನಾಟಕ

karnataka

ETV Bharat / bharat

ಮಸೂದ್​ ಜಾಗತಿಕ ಉಗ್ರ ಎನ್ನಬೇಕಾದ್ರೆ ಕಂಡೀಷನ್​! ಚೀನಾ ಕಿವಿಯಲ್ಲಿ ಪಾಕ್​ ಊದಿದ್ದೇನು? - ಭಾರತ

ಮಸೂದ್​ ಅಜರ್​ನನ್ನು ಜಾಗತಿಕ ಉಗ್ರನೆಂದು ಘೋಷಿಸಲು ಪಾಕಿಸ್ತಾನ ಕೆಲ ಷರತ್ತುಗಳನ್ನು ಚೀನಾ ಮೂಲಕ ಭಾರತದ ಮೇಲೆ ವಿಧಿಸಲು ಯೋಚಿಸಿತ್ತು ಎನ್ನಲಾಗಿದೆ

ಚೀನಾ ಮೂಲಕ ಭಾರತದ ಮೇಲೆ ಷರತ್ತು ಹೇರಲು ಯೋಚಿಸಿದ್ದ ಪಾಕ್​

By

Published : Mar 28, 2019, 3:21 PM IST

ನವದೆಹಲಿ:ಜೈಷೆ ಮೊಹಮ್ಮದ್​ ಉಗ್ರ ಮಸೂದ್​ ಅಜರ್​ನನ್ನು ಜಾಗತಿಕ ಉಗ್ರನೆಂದು ಘೋಷಿಸಲು ಚೀನಾ ತೊಡರುಗಾಲು ಹಾಕುತ್ತಿದೆ. ಇತ್ತ ಚೀನಾದ ಮಿತ್ರರಾಷ್ಟ್ರ ಪಾಕ್​ ಇದೇ ವಿಚಾರವಾಗಿ ಕೆಲ ಷರತ್ತುಗಳನ್ನು ಭಾರತದ ಮೇಲೆ ವಿಧಿಸುವಂತೆ ಕಿವಿ ಊದಿತ್ತು ಎಂದು ತಿಳಿದುಬಂದಿದೆ.

ಮಸೂದ್​ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸಲು ಅಮೆರಿಕ ಎಲ್ಲಿಲ್ಲದ ಪ್ರಯತ್ನ ನಡೆಸುತ್ತಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಬಹಿರಂಗವಾಗಿ ಮಾತನಾಡುವುದು ಸೇರಿ ಹಲವು ರೀತಿಯಲ್ಲಿ ಪ್ರಯತ್ನ ನಡೆಸುತ್ತಲೇ ಇದೆ.

ಆದರೆ, ಚೀನಾ ತನ್ನ ಅಧಿಕಾರ ಬಳಸಿಕೊಂಡು ಇದಕ್ಕೆ ಒಲ್ಲೆ ಎನ್ನುತ್ತಲೇ ಇದೆ. ಸರಿಯಾದ ಕಾರಣ ಸಿಕ್ಕ ನಂತರ ಈ ನಿರ್ಣಯಕ್ಕೆ ಸಮ್ಮತಿಸುವುದಾಗಿ ತಾಂತ್ರಿಕ ತಡೆಯೊಡ್ಡಿದೆ. ಒಂದು ಪಕ್ಷ ಚೀನಾ ಸಮ್ಮತಿಸಬೇಕಾದರೆ ಭಾರತ ಕೆಲ ಷರತ್ತುಗಳನ್ನು ಪಾಲಿಸಬೇಕು ಎಂದು ಪಾಕ್​ ಹೇಳಿತ್ತು. ತನ್ನ ಗಡಿಯಲ್ಲಿ ಸೈನಿಕರ ಸಂಖ್ಯೆಯನ್ನು ಕಡಿಮೆಗೊಳಿಸಬೇಕು ಹಾಗೂ ಕಾಶ್ಮೀರ ಸೇರಿ ಎಲ್ಲ ಸಮಸ್ಯೆಗಳನ್ನು ಮಾತುಕತೆ ಮೂಲಕವೇ ಬಗೆಹರಿಸಬೇಕು. ಇದಕ್ಕೆ ಒಪ್ಪಿದರೆ ಮಾತ್ರ ಅಜರ್​ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ಸಮ್ಮತಿಸುವಂತೆ ಚೀನಾದ ಮೇಲೂ ಒತ್ತಡ ಹೇರಿತ್ತು ಎಂದು ತಿಳಿದು ಬಂದಿದೆ.

ಭಾರತ ಹಾಗೂ ಅಮೆರಿಕ ರಾಜತಾಂತ್ರಿಕ ಮೂಲಗಳಂತೆ, ಪಾಕ್​ನ ಈ ಬೇಡಿಕೆಯನ್ನು ಚೀನಾ ಅಮೆರಿಕಾದ ಮುಂದಿಟ್ಟಿತ್ತು. ಆದರೆ ಅಜರ್​ ವಿಚಾರಕ್ಕೂ, ಭಾರತ-ಪಾಕ್ ಮಾತುಕತೆಗೂ ಯಾವ ಸಂಬಂಧವೂ ಇಲ್ಲವೆಂದು ಟ್ರಂಪ್​ ಸರ್ಕಾರ ಅಲ್ಲಗಳೆದಿದೆ ಎಂದು ಹೇಳಲಾಗಿದೆ.

ಮಸೂದ್​ನನ್ನು ಜಾಗತಿಕ ಉಗ್ರನೆಂಧು ಘೋಷಿಸಲು ಅಡ್ಡಗಾಲು ಹಾಕುತ್ತಲೇ ಬಂದಿರುವ ಚೀನಾ, ಸ್ಪಷ್ಟ ಮಾಹಿತಿ ಪಡೆಯಲು ಕೆಲ ಸಮಯ ಬೇಕು ಎಂದು ಕೇಳಿತ್ತು. ಅಮೆರಿಕ, ಭಾರತ ಸೇರಿ ವಿಶ್ವದ ಬಲಾಢ್ಯ ರಾಷ್ಟ್ರಗಳು ಈ ಬಗ್ಗೆ ಆಗ್ರಹಿಸುತ್ತಲೇ ಇದ್ದು, ಚೀನಾದ ಮುಂದಿನ ನಡೆ ಕುತೂಹಲ ಕೆರಳಿಸಿದೆ.

_____________


ABOUT THE AUTHOR

...view details