ಸೊಪೊರ್(ಜಮ್ಮು ಕಾಶ್ಮೀರ): ಕಾಶ್ಮೀರದ ಗಡಿಯಲ್ಲಿ ಉಗ್ರ ದಮನ ಮುಂದುವರಿದಿದ್ದು, ಸೊಪೊರ್ ಜಿಲ್ಲೆಯಲ್ಲಿ ಪೊಲೀಸರು ಲಷ್ಕರ್ ಉಗ್ರನನ್ನು ಹೊಡೆದುರುಳಿಸಿದ್ದಾರೆ.
ಎನ್ಕೌಂಟರ್ಗೆ ಲಷ್ಕರ್ ಉಗ್ರ ಬಲಿ..! - ಲಷ್ಕರ್ ಇ ತೈಬಾ ಉಗ್ರ ಸಂಘಟನೆ
ಲಷ್ಕರ್ ಇ ತೋಯ್ಬಾ ಉಗ್ರ ಸಂಘಟನೆಗೆ ಸೇರಿರುವ ಆಸಿಫ್, ಕೆಲ ದಿನಗಳ ಹಿಂದೆ ಸೊಪೊರ್ನಲ್ಲಿ ನಡೆದ ಶೂಟೌಟ್ನ ಪ್ರಮುಖ ರೂವಾರಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಎನ್ಕೌಂಟರ್ಗೆ ಲಷ್ಕರ್ ಉಗ್ರ ಬಲಿ
ಲಷ್ಕರ್ ಉಗ್ರ ಸಂಘಟನೆಗೆ ಸೇರಿರುವ ಆಸಿಫ್, ಕೆಲ ದಿನಗಳ ಹಿಂದೆ ಸೊಪೊರ್ನಲ್ಲಿ ನಡೆದ ಶೂಟೌಟ್ನ ಪ್ರಮುಖ ರೂವಾರಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಶೂಟೌಟ್ನಲ್ಲಿ ಹಣ್ಣಿನ ವ್ಯಾಪಾರಿಯ ಕುಟುಂಬದ ಮೂವರಿಗೆ ಗಾಯವಾಗಿತ್ತು. ಇದರ ಜೊತೆಗೆ ವಲಸೆ ಕಾರ್ಮಿಕ ಶಫಿ ಅಲಂ ಎನ್ನುವಾತನ ಸಾವಿಗೆ ಕಾರಣನಾಗಿದ್ದ.
ಸೊಪೋರ್ ಪ್ರದೇಶದಲ್ಲಿ ಇಂದು ಮುಂಜಾನೆ ನಡೆದ ಗುಂಡಿನ ಚಕಮಕಿಯಲ್ಲಿ ಲಷ್ಕರ್ ಉಗ್ರ ಅಸಿಫ್ನನ್ನು ಹತ್ಯೆ ಮಾಡಲಾಗಿದೆ. ಈ ಎನ್ಕೌಂಟರ್ ವೇಳೆ ಇಬ್ಬರು ಪೊಲೀಸರಿಗೆ ಗಾಯಗಳಾಗಿವೆ.