ಕುಪ್ವಾರಾ:ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಕರ್ನಾ ಬಳಿ ಇರುವ ಲೋಂಥಾ ಎಂಬ ಗ್ರಾಮದಲ್ಲಿ ವಿದ್ಯುತ್ ಆಘಾತದಿಂದ ಚಿರತೆಯೊಂದು ಮೃತಪಟ್ಟಿದೆ.
ಟ್ರಾನ್ಸ್ಫಾರ್ಮರ್ ಹತ್ತಿದ ಚಿರತೆ, ವಿದ್ಯುತ್ ಸ್ಪರ್ಶದಿಂದ ಸಾವು - Leopard electrocuted in Karnah Kupwara
ಗ್ರಾಮವೊಂದರ ಬಳಿ ಅಳವಡಿಸಲಾಗಿದ್ದ ಟ್ರಾನ್ಸಫಾರ್ಮರ್ ಬಳಿ ಬಂದ ಚಿರತೆಯೊಂದು ವಿದ್ಯುತ್ ಆಘಾತದಿಂದ ಮೃತಪಟ್ಟಿದೆ.
ವಿದ್ಯುತ್ ಟ್ರಾನ್ಸ್ಫಾರ್ಮರ್ಗೆ ಸಿಲುಕಿ ಚಿರತೆ ಸಾವು
ಈ ಪ್ರದೇಶದಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ಟ್ರಾನ್ಸ್ಫಾರ್ಮರ್ ಹತ್ತಿರ ಬಂದ ಚಿರತೆ, ಅದನ್ನು ಮುಟ್ಟಿದ್ದರಿಂದ ವಿದ್ಯುತ್ ತಗುಲಿ ಮೃತಪಟ್ಟಿದೆ. ಕಳೆದ ರಾತ್ರಿ ಈ ಅವಘಡ ಸಂಭವಿಸಿರುವುದು ಬೆಳಕಿಗೆ ಬಂದಿದೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ ಹಲವು ತಿಂಗಳುಗಳಲ್ಲಿ ಉತ್ತರ ಕಾಶ್ಮೀರದಲ್ಲಿ ಹಲವಾರು ವಿದ್ಯುತ್ ಅಪಘಾತದ ಪ್ರಕರಣಗಳು ಸಂಭವಿಸಿವೆ. ಅವುಗಳನ್ನು ತಡೆಯುವಲ್ಲಿ ಸಂಬಂಧಪಟ್ಟ ಇಲಾಖೆಗಳು ವಿಫಲವಾಗಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.