ನಲ್ಗೊಂಡ(ತೆಲಂಗಾಣ):ಚಿರತೆಯೊಂದು ನಲ್ಗೊಂಡ ಜಿಲ್ಲೆಯ ಮಾರಿಗುಡ ವಲಯದಲ್ಲಿ ಭಾರಿ ಆತಂಕ ಸೃಷ್ಟಿಸಿದೆ. ಗ್ರಾಮಸ್ಥರ ಮಾಹಿತಿ ಮೇರೆಗೆ ಚಿರತೆ ಸೆರೆಗೆ ಹೋದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಅದು ಎಗರಿದೆ.
ಕಾಡಿನಿಂದ ನಾಡಿಗೆ ಬಂದ ಚಿರತೆ ರಜಪುತನ ತಾಂಡಾದ ರೈತನ ಜಮೀನಿಗೆ ನುಗ್ಗಿತ್ತು. ಕೃಷ್ಣಾ ನಾಯಕ್ ಎಂಬ ರೈತ ದನಕರುಗಳು ಪ್ರವೇಶಿಸದಂತೆ ಬೆಳೆಗಳ ರಕ್ಷಣೆಗೆಂದು ವೈರ್ಅನ್ನು ಹಾಕಿದ್ದ. ಈ ವೈರ್ನಲ್ಲಿ ಸಿಲುಕಿಕೊಂಡು ಚಿರತೆ ಒದ್ದಾಡುತ್ತಿತ್ತು. ಈ ವಿಷಯವನ್ನು ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿ ಗಮನಕ್ಕೆ ತಂದಿದ್ದರು.