ಉದಯಪುರ್( ರಾಜಸ್ಥಾನ): 40 ವರ್ಷದ ವ್ಯಕ್ತಿಯೊಬ್ಬನನ್ನು ಚಿರತೆ ಕೊಂದು ಹಾಕಿದ ಘಟನೆ ರಾಜಸ್ಥಾನದ ಬಾರಾ ಬಾಂಗ್ಲಾ ಘಾಟ್ ಗ್ರಾಮದಲ್ಲಿ ನಡೆದಿದೆ.
ಬಾಲ್ಕನಿಯಲ್ಲಿ ಮಲಗಿದ ವ್ಯಕ್ತಿ ಮೇಲೆ ಚಿರತೆ ದಾಳಿ: ವ್ಯಕ್ತಿ ಬಲಿ - attacke
ದೇವಿ ಲಾಲ್ ಮೀನಾ ಎಂಬುವವರು ಬುಧವಾರ ತಮ್ಮ ನಿವಾಸದ ಬಾಲ್ಕನಿಯಲ್ಲಿ ನಿದ್ರೆಗೆ ಜಾರಿದ್ದರು. ಈ ವೇಳೆ ದಾಳಿ ಮಾಡಿದ ಚಿರತೆ ಆತನ ಮೇಲೆ ಎರಗಿ ಎಳೆದೊಯ್ದು ಕೊಂದು ಹಾಕಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದೇವಿ ಲಾಲ್ ಮೀನಾ ಎಂಬುವವರು ಬುಧವಾರ ತಮ್ಮ ನಿವಾಸದ ಬಾಲ್ಕನಿಯಲ್ಲಿ ನಿದ್ರೆಗೆ ಜಾರಿದ್ದರು. ಈ ವೇಳೆ ದಾಳಿ ಮಾಡಿದ ಚಿರತೆ ಆತನ ಮೇಲೆ ಎರಗಿ ಎಳೆದೊಯ್ದು ಕೊಂದು ಹಾಕಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೀನಾ ಅವರನ್ನ ಬಾಲ್ಕನಿಯಿಂದ ಎಳೆದೊಯ್ದ ಪರಿಣಾಮ ರಕ್ತ ಚಲ್ಲಾಡಿದ್ದು, ರಕ್ತವನ್ನು ನೋಡಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮೀನಾ ಒಬ್ಬರ ತಮ್ಮ ನಿವಾಸದಲ್ಲಿ ಇರುತ್ತಿದ್ದರು ಎಂಬ ವಿಷಯವೂ ಗೊತ್ತಾಗಿದೆ.
ಈ ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಉದಯಪುರ - ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಅರಣ್ಯ ಇಲಾಖೆ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ಗ್ರಾಮಸ್ಥರ ಮನ ಒಲಿಸಿ ಪ್ರತಿಭಟನೆ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.