ನವದೆಹಲಿ:ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಮೂರು ಪ್ರಮುಖ ಎಡ ಪಕ್ಷಗಳು ಒಗ್ಗಟ್ಟಿನಿಂದ ಸ್ಪರ್ಧಿಸಲಿದ್ದು, ಕಾಂಗ್ರೆಸ್-ಆರ್‌ಜೆಡಿ ಮಹಾಘಟಬಂಧನ ಜೊತೆ ಮೈತ್ರಿ ಮಾಡಿಕೊಳ್ಳಲು ಮುಕ್ತವಾಗಿವೆ ಎಂದು ಸಿಪಿಐ ಹಿರಿಯ (ಮಾರ್ಕ್ಸ್‌ವಾದಿ) ನಾಯಕ ಹನ್ನನ್ ಮೊಲ್ಲಾ ಹೇಳಿದ್ದಾರೆ.
ಈಟಿವಿ ಭಾರತದ ಜೊತೆ ಮಾತನಾಡಿರುವ ಮೊಲ್ಲಾ ಅವರು, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ), ಸಿಪಿಐ (ಎಂ) ಮತ್ತು ಸಿಪಿಐಎಂಎಲ್ ಪರಸ್ಪರ ಎದುರಾಳಿಯಾಗಿ ಹೋರಾಡುವ ಬದಲು ಒಗ್ಗಟ್ಟಿನಿಂದ ಸ್ಪರ್ಧಿಸಲು ನಿರ್ಧರಿಸಿವೆ ಎಂದು ಹೇಳಿದರು.
ಹನ್ನನ್ ಮೊಲ್ಲಾ, ಸಿಪಿಐ ಹಿರಿಯ ನಾಯಕ ಕಾಂಗ್ರೆಸ್ ಮತ್ತು ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಒಳಗೊಂಡ ಮಹಾಘಟಬಂಧನ ಸೇರಲು ಎಡ ಪಕ್ಷಗಳು ಸಿದ್ಧವಾಗಿವೆ ಎಂದು ಮೊಲ್ಲಾ ಹೇಳಿದ್ದಾರೆ. ಈ ವಿಷಯದ ಬಗ್ಗೆ ತಾವು ಈಗಾಗಲೇ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರೊಂದಿಗೆ ಮಾತನಾಡಿದ್ದೇನೆ. ಎಡ ಪಕ್ಷಗಳು ತಾವು ಸ್ಪರ್ಧಿಸಲು ಬಯಸುವ ಕ್ಷೇತ್ರಗಳ ಪಟ್ಟಿಯನ್ನು ಕಳುಹಿಸುವಂತೆ ಕೇಳಿಕೊಂಡರು ಎಂದು ಹೇಳಿದ್ದಾರೆ.
ಸಿಪಿಐ (ಎಂ) 17 ಸ್ಥಾನಗಳಲ್ಲಿ, ಸಿಪಿಐ 25 ಮತ್ತು ಸಿಪಿಐಎಂಎಲ್ 26 ಸ್ಥಾನಗಳಲ್ಲಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿವೆ. ಈಗಾಗಲೇ ಪಟ್ಟಿಯನ್ನು ಕಳುಹಿಸಲಾಗಿದೆ ಎಂದು ಮೊಲ್ಲಾ ಹೇಳಿದರು.
ಮೂಲಗಳ ಪ್ರಕಾರ, ಎಡ ಪಕ್ಷಗಳಿಗೆ ಒಟ್ಟು 30 ಸ್ಥಾನಗಳನ್ನು ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ, ಆದರೆ ಹಂಚಿಕೆ ಬಗ್ಗೆ ಇನ್ನೂ ಏನನ್ನೂ ನಿರ್ಧರಿಸಲಾಗಿಲ್ಲ, ಸೆಪ್ಟೆಂಬರ್ 11ರ ನಂತರ ಸಂಖ್ಯೆಗಳ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದಿದ್ದಾರೆ.