ಚೆನ್ನೈ: ಕೊರೊನಾ ಲಾಕ್‌ಡೌನ್ ರಾಜಸ್ಥಾನಿ ಕುಶಲಕರ್ಮಿಗಳಿಂದ ಜೀವನೋಪಾಯವನ್ನು ಕಸಿದುಕೊಂಡಿದೆ. ಜೇಡಿಮಣ್ಣಿನ ಕೆಲಸದಲ್ಲಿ ತೊಡಗಿರುವ ಕುಶಲಕರ್ಮಿಗಳು ಲಾಕ್‌ಡೌನ್ ಕಾರಣದಿಂದಾಗಿ ಹೆಣಗಾಡುತ್ತಿದ್ದಾರೆ.
ರಸ್ತೆಬದಿ ಡೇರೆಗಳಲ್ಲಿ ರಾಜಸ್ಥಾನಿ ವ್ಯಾಪಾರಿಗಳು ತಮ್ಮ ಸಾಂಪ್ರದಾಯಿಕ ಉಡುಪಿನಲ್ಲಿ, ದೇವತೆಗಳ ಪ್ರತಿಮೆಗಳು ಮತ್ತು ವಿವಿಧ ಜನಪ್ರಿಯ ಗೊಂಬೆಗಳನ್ನು ತಯಾರಿಸುತ್ತಾರೆ. ಬಳಿಕ ಅವರು ನಗರದ ಅನೇಕ ಸ್ಥಳಗಳಲ್ಲಿ ಅವುಗಳನ್ನು ಮಾರಾಟ ಮಾಡುತ್ತಾರೆ. ಆದರೆ ಲಾಕ್ ಡೌನ್ ಕಾರಣ ವ್ಯಾಪಾರವೇ ಮುಚ್ಚಿದೆ.
ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ ಕುಶಲಕರ್ಮಿಗಳು ರಸ್ತೆಬದಿಯ ಗುಡಿಸಲಿನಲ್ಲಿ ವಾಸವಿರುವ ಸುಮಾರು 25 ಕುಟುಂಬದವರು ತಮ್ಮ ಭವಿಷ್ಯದ ಕುರಿತು ಚಿಂತಿಸುತ್ತಿದ್ದಾರೆ.
“ನಾವು ಪ್ರತಿಮೆಗಳು ಮತ್ತು ಗೊಂಬೆಗಳನ್ನು ಜೇಡಿಮಣ್ಣಿನಿಂದ ತಯಾರಿಸಿ, ಅವುಗಳನ್ನು ಮಾರಾಟ ಮಾಡುವ ಮೂಲಕ ಜೀವನ ಸಾಗಿಸುತ್ತೇವೆ. ಸಾರ್ವಜನಿಕ ಸಾರಿಗೆ ಸ್ಥಗಿತಗೊಂಡಿರುವುದರಿಂದ, ನಾವು ಗೊಂಬೆಗಳನ್ನು ಮಾರಾಟ ಮಾಡಲು ಇತರ ಸ್ಥಳಗಳಿಗೆ ಹೋಗಲು ಸಾಧ್ಯವಿಲ್ಲ. ನಮ್ಮ ಕರುಣಾಜನಕ ಸ್ಥಿತಿಯನ್ನು ಕಂಡು ಕೆಲ ದಾರಿಹೋಕರು ಆಹಾರ ನೀಡುತ್ತಾರೆ. ನಾವು ಸರ್ಕಾರದ ಸಹಾಯಕ್ಕಾಗಿ ಕಾಯುತ್ತಿದ್ದೇವೆ.” ಎಂದು ಕುಶಲಕರ್ಮಿಗಳು ಹೇಳುತ್ತಾರೆ.
ಎಲ್ಲವೂ ಸಾಮಾನ್ಯ ಸ್ಥಿತಿಗೆ ಮರಳಿದ ನಂತರ ವ್ಯಾಪಾರ ನಡೆಸುವ ಭರವಸೆ ಹೊಂದಿದ್ದಾರೆ.