ಮುಂಬೈ: ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರು ತಮ್ಮ ಟ್ವಿಟ್ಟರ್ನಲ್ಲಿ '78 ವರ್ಷಗಳ ಜೀವನದಲ್ಲಿ ಕಲಿತಿದ್ದಕ್ಕಿಂತಲೂ ಹೆಚ್ಚಿನ ಜೀವನ ಪಾಠವನ್ನು ಈ ಲಾಕ್‌ಡೌನ್ ಸಮಯದಲ್ಲಿ ಕಲಿತಿದ್ದೇನೆ' ಎಂದು ಬರೆದುಕೊಂಡಿದ್ದಾರೆ.
78 ವರ್ಷ ಕಲಿಸದ ಪಾಠ ಲಾಕ್‌ಡೌನ್ ಕಲಿಸಿದೆ: ಬಿಗ್ ಬಿ ಹೀಗೆ ಹೇಳಿದ್ದೇಕೆ? - Amitabh Bachchan on lockdown
ಬಾಲಿವುಡ್ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ಟ್ವಿಟ್ಟರ್ನಲ್ಲಿ, ತಾವು 78 ವರ್ಷಗಳಲ್ಲಿ ಕಲಿತಿದ್ದಕ್ಕಿಂತಲೂ ಹೆಚ್ಚು ಜೀವನ ಪಾಠವನ್ನು ಈ ಲಾಕ್‌ಡೌನ್ ಸಮಯದಲ್ಲಿ ಕಲಿತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
78 ವರ್ಷ ಕಲಿಯದ ಪಾಠ ಲಾಕ್‌ಡೌನ್ ಕಲಿಸಿತು: ಬಿಗ್ ಬಿ
ಲಾಕ್‌ಡೌನ್ ವೇಳೆ ನಾನು ಕಲಿತಷ್ಟು, ತಿಳಿದುಕೊಂಡಷ್ಟು, ಅರ್ಥ ಮಾಡಿಕೊಂಡಷ್ಟು 78 ವರ್ಷಗಳ ಜೀವಿತ ಅವಧಿಯಲ್ಲೇ ಕಲಿತಿಲ್ಲ. ಈ ಸಂಗತಿಯನ್ನು ಬಹಿರಂಗ ಪಡಿಸುತ್ತಿರುವುದೂ ಕೂಡ ಈ ಕಲಿಕೆಯ ಫಲಿತಾಂಶವೇ ಆಗಿದೆ ಎಂದು ಹೇಳಿಕೊಂಡಿದ್ದಾರೆ.
ಬಚ್ಚನ್ ಅವರು ತಮ್ಮ ಬ್ಲಾಗ್ನಲ್ಲಿ ಲಾಕ್‌ಡೌನ್ ದಿನಗಳ ಚಟುವಟಿಕೆಗಳನ್ನು, ಆಸಕ್ತಿಕರ ವಿಚಾರಗಳನ್ನು, ಕುಟುಂಬದೊಂದಿಗೆ ಕಳೆಯುತ್ತಿರುವ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ, ಮನೆಗೆಲಸಕ್ಕೆ ನಿಯೋಜಿಸಿರುವ ಸಿಬ್ಬಂದಿಗೆ ಎಲ್ಲಾ ಕೆಲಸ ಬಿಡುವ ಬದಲು ಮನೆ ಕೆಲಸದಲ್ಲಿ ಪಾಲ್ಗೊಳ್ಳುವುದನ್ನು ಕಲಿತಿರುವುದಾಗಿ ಹೇಳಿಕೊಂಡಿದ್ದಾರೆ.
Last Updated : May 31, 2020, 7:47 PM IST