ಕರ್ನಾಟಕ

karnataka

ETV Bharat / bharat

ಚುನಾವಣೆ ಪ್ರಚಾರದ ವೈಖರಿ 'RSS'​ನಿಂದ ಕಲಿಯಿರಿ! ಶರದ್​ ಪವಾರ್​ ಅಚ್ಚರಿಯ ಹೇಳಿಕೆ -

ನಾನು ಸಂಘಪರಿವಾರದ ಎಲ್ಲ ನಡೆಗಳನ್ನು ಅನುಸರಿಸಿ ಎನ್ನುತ್ತಿಲ್ಲ. ಮತದಾರರನ್ನು ತಲುಪಲು ಅವರು ತೋರುವ ಪರಿಶ್ರಮದ ಬಗ್ಗೆ ನಾವು ಕಲಿಯಬೇಕಿದೆ ಎಂದು ಸಲಹೆ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ

By

Published : Jun 7, 2019, 8:31 PM IST

ಮುಂಬೈ:ಪಕ್ಷದ ಕಾರ್ಯಕರ್ತರು ಸಂಘ ಪರಿವಾರದ ಸ್ವಯಂಸೇವಕರ ಪುಸ್ತಕದಿಂದ ಪಾಠ ಕಲಿಯಬೇಕು ಎಂದು ಎನ್​ಸಿಪಿ ಮುಖಂಡ ಶರದ್ ಪವಾರ್ ಹೇಳಿದ್ದಾರೆ.

ಇಲ್ಲಿನ ಪಿಂಪ್ರಿ-ಚಿಂಚವಾಡ್​ ಪ್ರದೇಶದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, 'ನಾನು ಸಂಘಪರಿವಾರದ ಎಲ್ಲ ನಡೆಗಳನ್ನು ಅನುಸರಿಸಿ ಎನ್ನುತ್ತಿಲ್ಲ. ಮತದಾರರನ್ನು ತಲುಪಲು ಅವರು ತೋರುವ ಪರಿಶ್ರಮದ ಬಗ್ಗೆ ನಾವು ಕಲಿಯಬೇಕಿದೆ' ಎಂದು ಸಲಹೆ ನೀಡಿದ್ದಾರೆ.

ನೀವು (ಪಕ್ಷದ ಕಾರ್ಯಕರ್ತರು) ಸಂಘ ಪರಿವಾರದವರು ಹೇಗೆ ಪ್ರಚಾರ ಮಾಡುತ್ತಾರೆ ಎಂಬುದನ್ನು ನೋಡಿ. ಅವರು 5 ಮನೆಗೆ ಭೇಟಿ ನೀಡಿ ಪ್ರಚಾರ ಮಾಡಿದರೆ, ಅದರಲ್ಲಿ ಒಬ್ಬರು ಹತ್ತಿರವಾಗುತ್ತಾರೆ. ಮತ್ತೆ ಮತ್ತೆ ಭೇಟಿಕೊಟ್ಟು ತಮ್ಮ ಸಂದೇಶವನ್ನು ತಲುಪಿಸುತ್ತಾರೆ. ಜನರ ಜೊತೆಗೆ ಹೇಗೆ ಸಂಪರ್ಕದಲ್ಲಿ ಇರಬೇಕು ಎಂಬುದು ಆರ್​ಎಸ್​ಎಸ್​ ಕಾರ್ಯಕರ್ತರಿಗೆ ಚೆನ್ನಾಗಿ ತಿಳಿದಿದೆ ಎಂದು ಪ್ರಶಂಸಿಸಿದ್ದಾರೆ.

ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ಪಕ್ಷದ ಕಾರ್ಯಕರ್ತರು ಧೃತಿಗೆಡಬೇಕಿಲ್ಲ. ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಸನ್ನದ್ಧರಾಗುವಂತೆ ಕರೆ ನೀಡಿದ್ದಾರೆ.

For All Latest Updates

TAGGED:

ABOUT THE AUTHOR

...view details