ಕಾನ್ಪುರ (ಯು.ಪಿ): ಹಿರಿಯ ವಕೀಲರೊಬ್ಬರಲ್ಲಿ ಕೋವಿಡ್-19 ದೃಢಪಟ್ಟ ಹಿನ್ನೆಲೆ ಕಾನ್ಪುರ ಜಿಲ್ಲಾ ನ್ಯಾಯಾಲಯವನ್ನು ಎರಡು ದಿನಗಳ ಸೀಲ್ ಡೌನ್ ಮಾಡಲಾಗಿದೆ ಎಂದು ಜಿಲ್ಲಾ ಬಾರ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.
ಹಿರಿಯ ವಕೀಲರಿಗೆ ಕೊರೊನಾ... ಕಾನ್ಪುರ ಜಿಲ್ಲಾ ನ್ಯಾಯಾಲಯ ಸೀಲ್ ಡೌನ್ - ಕಾನ್ಪುರ ಜಿಲ್ಲಾ ನ್ಯಾಯಾಲಯ
ಕಾನ್ಪುರ ಜಿಲ್ಲಾ ನ್ಯಾಯಾಲಯದ ಹಿರಿಯ ವಕೀಲರೊಬ್ಬರಲ್ಲಿ ಕೋವಿಡ್-19 ದೃಢಪಟ್ಟ ಹಿನ್ನೆಲೆ ನ್ಯಾಯಾಲಯವನ್ನು ಸೀಲ್ ಡೌನ್ ಮಾಡಲಾಗಿದೆ.
![ಹಿರಿಯ ವಕೀಲರಿಗೆ ಕೊರೊನಾ... ಕಾನ್ಪುರ ಜಿಲ್ಲಾ ನ್ಯಾಯಾಲಯ ಸೀಲ್ ಡೌನ್ covid](https://etvbharatimages.akamaized.net/etvbharat/prod-images/768-512-7572070-527-7572070-1591872152074.jpg)
ಗ್ವಾಲ್ಟೋಲಿಯ ನಿವಾಸಿಯಾಗಿರುವ ಹಿರಿಯ ವಕೀಲರೊಬ್ಬರಿಗೆ ಕೊರೊನಾ ದೃಢಪಡುತ್ತಿದ್ದಂತೆ ಜಿಲ್ಲಾ ನ್ಯಾಯಾಧೀಶ ಮೊಹಮ್ಮದ್ ರಿಯಾಜ್ ಇಡೀ ನ್ಯಾಯಾಲಯದ ಆವರಣವನ್ನು ಸೀಲ್ ಡೌನ್ ಮಾಡಲು ಆದೇಶಿಸಿದ್ದಾರೆ ಎಂದು ಕಾನ್ಪುರ್ ಬಾರ್ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಕಪಿಲ್ ದೀಪ್ ಸಚನ್ ತಿಳಿಸಿದ್ದಾರೆ.
ಇಡೀ ನ್ಯಾಯಾಲಯದ ಆವರಣವನ್ನು ಸ್ವಚ್ಛಗೊಳಿಸಲಾಗುವುದು. ನ್ಯಾಯಾಲಯದಲ್ಲಿ ಎರಡು ದಿನಗಳ ಕಾಲ ವಿಚಾರಣೆ ಸೇರಿದಂತೆ ಎಲ್ಲಾ ಕಾನೂನು ಮತ್ತು ನ್ಯಾಯಾಂಗ ಕಾರ್ಯಗಳನ್ನು ರದ್ದುಗೊಳಿಸಲಾಗುವುದು. ವೈರಸ್ ಹರಡುವುದನ್ನು ತಪ್ಪಿಸಲು ರಿಜಿಸ್ಟ್ರಾರ್ ಕಚೇರಿಗಳನ್ನು ಎರಡು ದಿನಗಳವರೆಗೆ ಮುಚ್ಚುವಂತೆ ಸಚನ್ ಮನವಿ ಮಾಡಿದ್ದಾರೆ.