ನವದೆಹಲಿ:ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಅಪರಾಧಿಗಳ ಗಲ್ಲು ಶಿಕ್ಷೆಗೆ ತಡೆ ನೀಡುವಂತೆ ಕೋರಿ ಅಪರಾಧಿಗಳ ಪರ ವಕೀಲ ಎ.ಪಿ.ಸಿಂಗ್, ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಗಲ್ಲು ಶಿಕ್ಷೆಗೆ ತಡೆ ಕೋರಿ ನಿರ್ಭಯಾ ಅಪರಾಧಿಗಳ ವಕೀಲ ಎ.ಪಿ.ಸಿಂಗ್ ಅರ್ಜಿ - ಅಪರಾಧಿಗಳ ಪರ ವಕೀಲ ಎ ಪಿ ಸಿಂಗ್
ದೆಹಲಿ ಜೈಲು ನಿಯಮದ ಪ್ರಕಾರ, ನಾಲ್ವರಲ್ಲಿ ಕೊನೆಯ ಅಪರಾಧಿಯ ಕ್ಷಮಾದಾನ ಅರ್ಜಿ ಸೇರಿದಂತೆ, ತನಗಿರುವ ಇತರೆ ಕಾನೂನು ಆಯ್ಕೆಗಳನ್ನು ಬಳಸಿಕೊಳ್ಳುವವರೆಗೂ ಒಂದೇ ಪ್ರಕರಣದ ಅಪರಾಧದಲ್ಲಿರುವ ಯಾರನ್ನೂ ಗಲ್ಲಿಗೇರಿಸುವಂತಿಲ್ಲ ಎಂದು ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಅಪರಾಧಿಗಳ ಪರ ವಕೀಲ ಎ.ಪಿ.ಸಿಂಗ್ ಹೇಳಿದ್ದಾರೆ.
ದೆಹಲಿ ಜೈಲು ನಿಯಮದ ಪ್ರಕಾರ, ನಾಲ್ವರಲ್ಲಿ ಕೊನೆಯ ಅಪರಾಧಿಯು ಕ್ಷಮಾದಾನ ಅರ್ಜಿ ಸೇರಿದಂತೆ, ತನಗಿರುವ ಇತರೆ ಕಾನೂನು ಆಯ್ಕೆಗಳನ್ನು ಬಳಸಿಕೊಳ್ಳುವವರೆಗೂ ಒಂದೇ ಪ್ರಕರಣದ ಅಪರಾಧದಲ್ಲಿರುವ ಯಾರನ್ನೂ ಗಲ್ಲಿಗೇರಿಸುವಂತಿಲ್ಲ ಎಂದು ಎ.ಪಿ.ಸಿಂಗ್, ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಫೆ.1 ರಂದು ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಖಚಿತವಾಗಿತ್ತಾದರೂ, ನಾಲ್ವರಲ್ಲಿ ಓರ್ವ ಅಪರಾಧಿ ಅಕ್ಷಯ್ ಕುಮಾರ್ ಸಿಂಗ್ ಸುಪ್ರೀಂಕೋರ್ಟ್‌ಗೆ ಕ್ಯುರೇಟಿವ್ (ಪರಿಹಾರಾತ್ಮಕ) ಅರ್ಜಿ ಸಲ್ಲಿಸಿ ಕ್ಷಮಾದಾನ ನೀಡುವಂತೆ ಮನವಿ ಮಾಡಿದ್ದು, ಈ ಅರ್ಜಿಯ ವಿಚಾರಣೆಯನ್ನು ಇಂದು ಸುಪ್ರೀಂಕೋರ್ಟ್ ನಡೆಸಲಿದೆ.