ಲಖನೌ(ಉತ್ತರಪ್ರದೇಶ): ಮೇಯಿನ್ಪುರಿ ಜಿಲ್ಲೆಯಲ್ಲಿ ದಲಿತ ವ್ಯಕ್ತಿಯನ್ನು ಹತ್ಯೆ ಮಾಡಿದ್ದ ಪ್ರಕರಣ ಸಂಬಂಧ ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹತ್ಯೆ ಘಟನೆಯನ್ನು ಖಂಡಿಸಿ ಮಾತನಾಡಿರುವ ಅವರು, ಯುಪಿಯಲ್ಲಿ ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಬಿಜೆಪಿ ನೇತೃತ್ವದ ಸರ್ಕಾರದ ಕಾನೂನು ಮತ್ತು ಸುವ್ಯವಸ್ಥೆಯನ್ನು ಎತ್ತಿ ತೋರಿಸುತ್ತದೆ ಎಂದು ಟ್ವಿಟರ್‌ನಲ್ಲಿ ಕಿಡಿಕಾರಿದ್ದಾರೆ.
ಉತ್ತರಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆ ಪ್ರಶ್ನಿಸಿ ಮಾಯಾವತಿ ಆಕ್ರೋಶದ ಟ್ವೀಟ್ - ಉತ್ತರಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ
ಉತ್ತರಪ್ರದೇಶದ ನೋಯ್ಡಾದಲ್ಲಿ ಸೆಪ್ಟೆಂಬರ್ 6ರಂದು ಕ್ಯಾಬ್ ಚಾಲಕನ ಮೇಲೆ ಹಲ್ಲೆ ಮಾಡಲಾಗಿತ್ತು. ತೀವ್ರ ಗಾಯಗೊಂಡಿದ್ದ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ..

ನಿನ್ನೆಯಷ್ಟೇ ಮೇಯಿನ್ಪುರಿಯಲ್ಲಿ ದಲಿತ ಸಮುದಾಯದ 45 ವರ್ಷದ ಸರ್ವೇಶ್‌ಕುಮಾರ್ ಎಂಬುವರನ್ನು ಥಳಿಸಿ ಹತ್ಯೆ ಮಾಡಲಾಗಿದೆ. ಇಂತಹದ್ದೇ ಘಟನೆ ಗೋವಿಂದ್ ಚೌಹಾಣ್ ಎಂಬುವರನ್ನು ಮಹಾರಾಜ್‌ಗಂಜ್, ರಾಜ್‌ಮೀರ್ ಮೌರ್ಯ ಎಂಬುವರನ್ನು ಶಹಜಹಾನ್‌ಪುರ್, ವಾಸಿದ್ ಎಂಬುವರನ್ನು ಬರೇಲಿಯಲ್ಲಿ, ಸುದೀರ್‌ಸಿಂಗ್ ಎಂಬುವರನ್ನು ಕುಶೀನಗರ್ ಮತ್ತು ವಿನೋದ್ ಗರ್ಗ್ ಎಂಬ ವ್ಯಕ್ತಿಯನ್ನು ಬ್ರಮೀಣ್‌ನಲ್ಲಿ ಶೂಟ್ ಮಾಡಿ ಕೊಂದಿರುವುದು ಅತ್ಯಂತ ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಉತ್ತರಪ್ರದೇಶದ ನೋಯ್ಡಾದಲ್ಲಿ ಸೆಪ್ಟೆಂಬರ್ 6ರಂದು ಕ್ಯಾಬ್ ಚಾಲಕನ ಮೇಲೆ ಹಲ್ಲೆ ಮಾಡಲಾಗಿತ್ತು. ತೀವ್ರ ಗಾಯಗೊಂಡಿದ್ದ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಘಟನೆ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.