ಕರ್ನಾಟಕ

karnataka

ETV Bharat / bharat

ತಾಂತ್ರಿಕ ಕಾರಣದಿಂದ GISAT-1 ಉಪಗ್ರಹ ಉಡಾವಣೆ ಮುಂದೂಡಿಕೆ: ಇಸ್ರೋ - ಭಾರತೀಯ ಬಾಹ್ಯಾಕಾಶ ಸಂಸ್ಥೆ ಲೇಟೆಸ್ಟ್ ನ್ಯೂಸ್

ನಾಳೆಗೆ ನಿಗದಿಯಾಗಿದ್ದ GISAT-1 ಉಪಗ್ರಹ ಉಡಾವಣೆಯನ್ನು ಮುಂದೂಡಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಮಾಹಿತಿ ನೀಡಿದೆ.

Launch of GISAT-1 postponed,GISAT-1 ಉಪಗ್ರಹ ಉಡಾವಣೆ ಮುಂದೂಡಿಕೆ
GISAT-1 ಉಪಗ್ರಹ ಉಡಾವಣೆ ಮುಂದೂಡಿಕೆ

By

Published : Mar 4, 2020, 7:17 PM IST

Updated : Mar 4, 2020, 7:29 PM IST

ಹೈದರಾಬಾದ್: ನಾಳೆಗೆ ನಿಗದಿಯಾಗಿದ್ದ GISAT-1 ಉಪಗ್ರಹ ಉಡಾವಣೆಯನ್ನು ಮುಂದೂಡಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಮಾಹಿತಿ ನೀಡಿದೆ.

ಭೂಮಿಯ ಚಿತ್ರ ಸೆರೆಹಿಡಿಯುವ (geo imaging satellite) GISAT-1 ಉಪಗ್ರಹವನ್ನು, ಜಿಎಸ್​ಎಲ್​ವಿ-ಎಫ್ 10 ಉಡಾವಣಾ ವಾಹನದ ಮೂಲಕ ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಾಳೆ ಸಂಜೆ 5:43ಕ್ಕೆ ಉಡಾವಣೆ ಮಾಡಲು ಇಸ್ರೋ ನಿರ್ಧರಿಸಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಉಡಾವಣೆಯನ್ನು ಮುಂದೂಡಲಾಗಿದ್ದು, ಮುಂದಿನ ದಿನಾಂಕವನ್ನು ತಿಳಿಸುವುದಾಗಿ ಇಸ್ರೋ ಹೇಳಿದೆ.

ಈ GISAT-1 ಉಪಗ್ರಹವು 2,275 ಕೆಜಿ ಇದ್ದು, ಭೂಮಿಯ ಬಗ್ಗೆ ಗಮನಹರಿಸುವಂತಹ ಉಪಗ್ರಹವಾಗಿದೆ. GSLV-F10 ಉಡ್ಡಯನ ವಾಹನವು ಈ ಉಪಗ್ರಹವನ್ನು ಜಿಯೋ ಸಿಂಕ್ರೊನಸ್ ಟ್ರಾನ್ಸ್​ಫರ್​​ ಕಕ್ಷೆಗೆ ಸೇರಿಸಲಿದೆ. ಈ ಉಪಗ್ರಹ, ಭಾರತದ ಪ್ರತಿ ನಿಮಿಷದ ಚಲನವಲನವನ್ನು ಸೂಕ್ಷ್ಮವಾಗಿ ಅರಿತು ಮೋಡ ರಹಿತ ಜಾಗದಿಂದ ಚಿತ್ರಗಳನ್ನು ಸೆರೆಹಿಡಿಯುತ್ತದೆ.

Last Updated : Mar 4, 2020, 7:29 PM IST

ABOUT THE AUTHOR

...view details