ಕರ್ನಾಟಕ

karnataka

ETV Bharat / bharat

ದಿಲ್ಲಿ ಮಹಿಳೆಗೆ ಕೊರೊನಾ... ವಿದೇಶ ಪ್ರಯಾಣ ಮಾಡದಿದ್ದರೂ ಸೋಂಕಿಗೀಡಾದ ಮೊದಲ ರೋಗಿ! - ನವದೆಹಲಿ ಮಹಿಳೆಗೆ ತಗುಲಿದ ಮಾರಕ ಕೊರೊನಾ

ಇಲ್ಲಿಯವರೆಗೆ ವಿದೇಶಕ್ಕೆ ಪ್ರಾಣಿಸಿದ ವ್ಯಕ್ತಿಗಳಲ್ಲಿ ಮಾತ್ರ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಆದರೆ ನವದೆಹಲಿಯಲ್ಲಿ ಮಹಿಳೆಯೊಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಈಕೆ ಸಾರ್ವಜನಿಕ ಸ್ಥಳದಲ್ಲಿ ರೋಗಿಯೊಂದಿಗೆ ಸಂಪರ್ಕಕ್ಕೆ ಬಂದಾಗಿನಿಂದ ಸೋಂಕಿಗೆ ತುತ್ತಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Latest coronavirus patient in Delhi has no travel history,ನವದೆಹಲಿ ಮಹಿಳೆಗೆ ತಗುಲಿದ ಮಾರಕ ಕೊರೊನಾ
ನವದೆಹಲಿ ಮಹಿಳೆಗೆ ತಗುಲಿದ ಮಾರಕ ಕೊರೊನಾ

By

Published : Mar 9, 2020, 11:31 PM IST

ನವದೆಹಲಿ: ರಾಷ್ಟ್ರ ರಾಜಧಾನಿಯ ಮಹಿಳೆಗೆ ಕೊರೊನಾ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದು, ನವದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.

ಈ ರೋಗಿ ವಿದೇಶ ಪ್ರವಾಸ ಮಾಡಿದ ಇತಿಹಾಸವಿಲ್ಲ. ಕೊರೊನಾ ಸೋಂಕಿತ ಪೇಟಿಎಂ ಉದ್ಯೋಗಿಯೊಂದಿಗೆ ಸಾರ್ವಜನಿಕ ಸ್ಥಳದಲ್ಲಿ ಸಂಪರ್ಕಕ್ಕೆ ಬಂದ ನಂತರ ಮಹಿಳೆಗೂ ಕೊರೊನಾ ವೈರಸ್ ತಗುಲಿದೆ ಎಂದು ದೆಹಲಿ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಹಿಳೆ ಶನಿವಾರ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಾಗಿದ್ದರು. ಕೊರೊನಾ ವೈರಸ್ ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಸೋಂಕು ತಗುಲಿರುವುದು ದೃಢಪಟ್ಟಿದೆ. ಸಫ್ದರ್ಜಂಗ್ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಲ್ಲಿ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details