ಸೋಲನ್ (ಹಿಮಾಚಲ ಪ್ರದೇಶ): 'ಹಿಮ ಚಿರತೆ' ಕಾರ್ಯಾಚರಣೆಯ ಸಂದರ್ಭದಲ್ಲಿ ಲಡಾಖ್‌ನಲ್ಲಿ ಪ್ರಾಣ ಕಳೆದುಕೊಂಡ ಹವಿಲ್ದಾರ್ ಮೇಜರ್ ಕುಲದೀಪ್ ಸಿಂಗ್ ಅವರಿಗೆ ಜನರು ಕಣ್ಣೀರ ವಿದಾಯ ಹೇಳಿದ್ದಾರೆ.
ಹುತಾತ್ಮ ಯೋಧ ಮೇಜರ್ ಕುಲದೀಪ್ ಸಿಂಗ್ಗೆ ಮಿಲಿಟರಿ ಗೌರವಗಳೊಂದಿಗೆ ವಿದಾಯ - ಲಡಾಖ್‌ನಲ್ಲಿ ಹಿಮ ಚಿರತೆಯ ಕಾರ್ಯಾಚರಣೆ
ಲಡಾಖ್‌ನಲ್ಲಿ ಹಿಮ ಚಿರತೆ ಕಾರ್ಯಾಚರಣೆಯ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ ಹವಿಲ್ದಾರ್ ಮೇಜರ್ ಕುಲದೀಪ್ ಸಿಂಗ್ ಅವರಿಗೆ ಮಿಲಿಟರಿ ಗೌರವಗಳೊಂದಿಗೆ ಅಂತಿಮ ವಿದಾಯ ಸಲ್ಲಿಸಲಾಯಿತು.
![ಹುತಾತ್ಮ ಯೋಧ ಮೇಜರ್ ಕುಲದೀಪ್ ಸಿಂಗ್ಗೆ ಮಿಲಿಟರಿ ಗೌರವಗಳೊಂದಿಗೆ ವಿದಾಯ Last rites of Maj Kuldeep Singh](https://etvbharatimages.akamaized.net/etvbharat/prod-images/768-512-10195043-642-10195043-1610315900256.jpg)
ಮೇಜರ್ ಹುತಾತ್ಮ
ತ್ರಿವರ್ಣ ಧ್ವಜ ಸುತ್ತಿದ ಸಿಂಗ್ ಅವರ ದೇಹವನ್ನು ಸೇನಾ ವಾಹನದಲ್ಲಿ ತರಲಾಯಿತು. ಸಶಸ್ತ್ರ ಪಡೆಗಳ ಅಧಿಕಾರಿಗಳು, ಜಿಲ್ಲಾಧಿಕಾರಿ, ಪೊಲೀಸ್ ಸಿಬ್ಬಂದಿ ಹಾಗೂ ಚುನಾಯಿತ ಪ್ರತಿನಿಧಿಗಳು ಗೌರವ ಸಲ್ಲಿಸಿದರು. ಜನರಲ್ ಹವಿಲ್ದಾರ್ ಸಿಂಗ್ ಅವರ ಪಾರ್ಥೀವ ಶರೀರವನ್ನು ಹೊತ್ತ ಕ್ಯಾಸ್ಕೆಟ್ ಮುಂದೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.
ಹವಿಲ್ದಾರ್ ಮಗಳು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಮೇಜರ್ಗೆ ಪತ್ನಿ ಮತ್ತು ಇಬ್ಬರು ಪುತ್ರಿಯರಿದ್ದಾರೆ.