ಕರ್ನಾಟಕ

karnataka

ETV Bharat / bharat

24 ಗಂಟೆಯಲ್ಲಿ 425 ಜನರು ಕೋವಿಡ್​ಗೆ ಬಲಿ... ಯುಎಸ್​ ದಾಖಲೆ ಮುರಿದ ಭಾರತ! - ಸಾವಿನ ಸಂಖ್ಯೆ

ಮಹಾಮಾರಿ ಕೊರೊನಾ ಅಬ್ಬರ ದೇಶದಲ್ಲಿ ಜೋರಾಗಿದ್ದು, ದಿನ ಕಳೆದಂತೆ ಅಧಿಕ ಪ್ರಕರಣ ಪತ್ತೆಯಾಗುತ್ತಿರುವುದು ಮತ್ತಷ್ಟು ಆತಂಕ ಮೂಡಿಸಿದೆ. ಇದರ ಮಧ್ಯೆ ಸಾವಿನ ಸಂಖ್ಯೆಯಲ್ಲೂ ಏರಿಕೆ ಕಂಡು ಬಂದಿದೆ.

Last 24 hours 425 death in India
Last 24 hours 425 death in India

By

Published : Jul 7, 2020, 12:19 AM IST

ನವದೆಹಲಿ: ದೇಶಾದ್ಯಂತ ಕೊರೊನಾ ಅಬ್ಬರ ಜೋರಾಗಿದ್ದು, ದಿನದಿಂದ ದಿನಕ್ಕೆ ಸೋಂಕಿತರು ಹಾಗೂ ಸಾವಿನ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿದೆ.

ದೇಶದಲ್ಲಿ ಇಲ್ಲಿಯವರೆಗೆ ಕೊರೊನಾ ಸೋಂಕಿನಿಂದ 19,693 ಜನರು ಸಾವನ್ನಪ್ಪಿದ್ದು, ಬ್ರೇಜಿಲ್​​ನಲ್ಲಿ 64,867 ಹಾಗೂ ಯುಎಸ್​​ನಲ್ಲಿ 1,29,947 ಜನರು ಸಾವನ್ನಪ್ಪಿದ್ದಾರೆ. ಸದ್ಯ ದೇಶದಲ್ಲಿ 7,01,240 ಕೋವಿಡ್​ ಪ್ರಕರಣಗಳಿವೆ. ಕಳೆದ 24 ಗಂಟೆಗಳಲ್ಲಿ 24,248 ಹೊಸ ಕೇಸ್​ ಪತ್ತೆಯಾಗಿದ್ದು, ಇಲ್ಲಿಯವರೆಗೆ 4,24,432 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

ವಿಶೇಷವೆಂದರೆ ಕಳೆದ 24 ಗಂಟೆಯಲ್ಲಿ ಯುಎಸ್​​ನಲ್ಲಿ 271 ಸಾವು ದಾಖಲಾಗಿದ್ದು, ಬ್ರೇಜಿಲ್​​ನಲ್ಲಿ 602 ಹಾಗೂ ಭಾರತದಲ್ಲಿ 425 ಜನರು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಸದ್ಯ ಸಾವಿನ ಪ್ರಮಾಣ 2.8ರಷ್ಟಿದ್ದು, ಯುಎಸ್​​ನಲ್ಲಿ 4.5 ಹಾಗೂ ಬ್ರೇಜಿಲ್​​ನಲ್ಲಿ 4.1ರಷ್ಟಿದೆ. ಒಟ್ಟಾರೆ ಜಾಗತಿಕವಾಗಿ ಇದರ ಪ್ರಮಾಣ 4.7ರಷ್ಟಿದೆ.

ಕೊರೊನಾ ವಿರುದ್ಧ ಈಗಾಗಲೇ ಭಾರತ ಬಯೋಟೆಕ್​ ಲಸಿಕೆ ಕಂಡು ಹಿಡಿಯುವ ಕಾರ್ಯದಲ್ಲಿ ಮಗ್ನವಾಗಿದ್ದು, ಈ ವಾರದಿಂದ ಮಾನವರ ಮೇಲೆ ಅದರ ಪ್ರಯೋಗ ನಡೆಸಲಿದ್ದು, ಅದಕ್ಕಾಗಿ 1,100 ಸೋಂಕಿತರ ಆಯ್ಕೆ ಮಾಡಿಕೊಳ್ಳಲಾಗಿದೆ.

ABOUT THE AUTHOR

...view details