ಕರ್ನಾಟಕ

karnataka

ETV Bharat / bharat

ಲೇಸರ್ ನಿರ್ದೇಶಿತ ಆ್ಯಂಟಿ ಟ್ಯಾಂಕ್ ಕ್ಷಿಪಣಿ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿ - Laser-Guided Anti Tank Guided Missile

ಲೇಸರ್​ ನಿರ್ದೇಶಿತ ಆ್ಯಂಟಿ ಟ್ಯಾಂಕ್​ ಕ್ಷಿಪಣಿಯನ್ನು (ಎಟಿಜಿಎಂ) ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್​​ಡಿಒ) ಇಂದು ಮತ್ತೊಮ್ಮೆ ಪರೀಕ್ಷೆ ನಡೆಸಿ ಯಶಸ್ವಿಯಾಗಿದೆ.

Laser-Guided Anti Tank Guided Missile
Laser-Guided Anti Tank Guided Missile

By

Published : Oct 1, 2020, 5:28 PM IST

ಅಹ್ಮದ್​​ನಗರ(ಮಹಾರಾಷ್ಟ್ರ):ಲೇಸರ್​ ನಿರ್ದೇಶಿತ ಆ್ಯಂಟಿ ಟ್ಯಾಂಕ್​ ಕ್ಷಿಪಣಿಯನ್ನು (ಎಟಿಜಿಎಂ) ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್​​ಡಿಒ) ಇಂದು ಮತ್ತೊಮ್ಮೆ ಪರೀಕ್ಷೆ ನಡೆಸಿ ಯಶಸ್ವಿಯಾಗಿದೆ.

ಕೆಕೆ ರೇಂಜ್​ನ ಆರ್ಮರ್ಡ್ ಕಾರ್ಪ್ಸ್ ಸೆಂಟರ್ ಮತ್ತು ಶಾಲೆ, ಅಹ್ಮದ್​ನಗರದಲ್ಲಿ ಪರೀಕ್ಷಾರ್ಥ ಪ್ರಯೋಗ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಲೇಸರ್ ಗೈಡೆಡ್ ಆ್ಯಂಟಿ ಟ್ಯಾಂಕ್ ಕ್ಷಿಪಣಿಯ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿ

ಎಟಿಜಿಎಂ ಈ ಪರೀಕ್ಷೆಗಳಲ್ಲಿ ನಿಗದಿತ ಗುರಿ 3 ಕಿಲೋ ಮೀಟರ್​​ನ್ನು ಯಶಸ್ವಿಯಾಗಿ ತಲುಪಿದ್ದು, ಇದರಿಂದ ಭಾರತೀಯ ರಕ್ಷಣಾ ಇಲಾಖೆಗೆ ಮತ್ತಷ್ಟು ಬಲ ಬಂದಿದೆ.

ಲೇಸರ್ ಗೈಡೆಡ್ ಆ್ಯಂಟಿ ಟ್ಯಾಂಕ್ ಕ್ಷಿಪಣಿಯ ಪ್ರಯೋಗಾರ್ಥ ಪರೀಕ್ಷೆ ಇದಾಗಿದ್ದು, ದೂರದ ಗುರಿಯನ್ನು ಯಶಸ್ವಿಯಾಗಿ ಎಟಿಜಿಎಂ ಕ್ಷಿಪಣಿ ಭೇದಿಸಿದೆ. ಈಗಾಗಲೇ ಸೆಪ್ಟೆಂಬರ್​ 22ರಂದು ನಡೆಸಿದ್ದ ಪರೀಕ್ಷೆಯೂ ಯಶಸ್ವಿಯಾಗಿತ್ತು. ಭಾರತೀಯ ಸೇನೆಯ ಎಂಬಿಟಿ ಅರ್ಜುನ್ ಟ್ಯಾಂಕ್‌ನಿಂದ ಎಟಿಜಿಎಂ ಕ್ಷಿಪಣಿಯ ಉಡಾವಣೆಯಾಗಿದೆ.

ABOUT THE AUTHOR

...view details