ಉತ್ತರಕಾಶಿ:ಉತ್ತರಾಖಂಡ್ನಲ್ಲಿ ಭಾರಿ ಮಳೆ ಆಗುತ್ತಿದ್ದು,. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉತ್ತರಕಾಶಿಯ ಬಂಗಣದಲ್ಲಿ ಭೂ ಕುಸಿತ ಸಂಭವಿಸಿದೆ. ಇದ್ದಕ್ಕಿದ್ದಂತೆ ಕುಸಿದ ಭೂಮಿ ಕುಸಿದಿದ್ದರಿಂದ ವಾಹನಗಳು ಪಾತಾಳ ಸೇರಿವೆ.
ವಾಹನಗಳು ಕಂದಕಕ್ಕೆ ಉರುಳುವ ದೃಶ್ಯಗಳು ಎಂಥವರ ಎದೆ ನಡುಗಿಸುವಂತಿದ್ದವು. ಈ ವಿಡಿಯೋಗಳು ಕ್ಯಾಮರಾದಲ್ಲಿ ಸೆರೆಯಾಗಿವೆ.
ಮಕ್ಕಳ ಆಟಿಕೆ ಸಾಮಗ್ರಿಗಳಂತೆ ಇದ್ದಕ್ಕಿದ್ದಂತೆ ಕಣ್ಣೆದುರಿಗೆ ಕಂದಕಕ್ಕೆ ಉರುಳುವ ದೃಶ್ಯ ಮಳೆ ರೌದ್ರ ನರ್ತನವನ್ನ ತೋರುವಂತಿತ್ತು. ಬೀಳುತ್ತಿದ್ದ ವಾಹನಗಳನ್ನ ಅಲ್ಲಿದ್ದ ಜನ ಬಚಾವ್ ಮಾಡಲು ಮುಂದಾದರಾದರೂ ಅದು ಸಾಧ್ಯವಾಗಲೇ ಇಲ್ಲ.
ಆಟಿಕೆ ಸಾಮಗ್ರಿಗಳಂತೆ ಪ್ರಪಾತಕ್ಕೆ ಬಿದ್ದ ವಾಹನಗಳು ಜನ ಸಹ ತಮ್ಮನ್ನು ತಾವು ಬಚಾವ್ ಮಾಡಿಕೊಳ್ಳಲು ಹರಸಾಹಸ ಪಡಬೇಕಾಯಿತು. ಕೆಲವರು ಈ ಘಟನೆಯಲ್ಲಿ ಗಾಯಗೊಂಡಿದ್ದು, ಡೆಹರಾಡೂನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ಮಾತನಾಡಿದ್ದು, ಈ ದೃಶ್ಯಗಳನ್ನ ನೋಡಿದ ತಮಗೆ ದಿಕ್ಕು ತೋಚದಾಯಿತು. ಇಂತಹ ಭಯಾನಕ ವಾತಾವರಣ ಭಾರಿ ಮಳೆಯಿಂದಾಗಿ ಈ ಪರಿಸ್ಥಿತಿ ಉತ್ತರಕಾಶಿಯಲ್ಲಿ ನಿರ್ಮಾಣವಾಗಿದೆ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಸರ್ಕಾರ ತ್ವರಿತ ಕಾರ್ಯಾಚರಣೆ ಕೈಗೊಂಡಿದ್ದು, ಸಂತ್ರಸ್ತರಿಗೆ ಪರಿಹಾರ ಘೋಷಣೆ ಮಾಡಿದೆ. ಅಷ್ಟೇ ಅಲ್ಲ ಜನ ಭಾರಿ ಭೂ ಕುಸಿತದಿಂದ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಹಾಗೂ ಆಸ್ತಿ ಪಾಸ್ತಿ ರಕ್ಷಣೆ ಮಾಡಿಕೊಳ್ಳಲು ಮಾಡುತ್ತಿದ್ದು ಪಡಿಪಾಟಲು ಹೇಳತೀರದಾಗಿದೆ.