ಕರ್ನಾಟಕ

karnataka

ETV Bharat / bharat

ಲಾಲೂ ಪ್ರಸಾದ್​ ಯಾದವ್​​​​ರಿಂದ ನಿಯಮ ಉಲ್ಲಂಘನೆ: ಬಿಜೆಪಿ ಗಂಭೀರ ಆರೋಪ - ರಾಂಚಿ

ಆರ್‌ಜೆಡಿ ನಾಯಕ ಲಾಲೂ ಪ್ರಸಾದ್​ ಯಾದವ್ ಜಾರ್ಖಂಡ್‌ನ ರಿಮ್ಸ್ ಆಸ್ಪತ್ರೆಯಲ್ಲಿ 'ದರ್ಬಾರ್' ನಡೆಸುತ್ತಿದ್ದಾರೆ ಎಂದು ಎಂದು ಬಿಜೆಪಿ ವಕ್ತಾರ ಪ್ರತುಲ್​ ಶಾಹ್ದಿಯೋ ಆರೋಪಿಸಿದ್ದಾರೆ.

ಲಾಲು ಪ್ರಸಾದ್​ ಯಾದವ್
ಲಾಲು ಪ್ರಸಾದ್​ ಯಾದವ್

By

Published : Jul 13, 2020, 7:41 AM IST

Updated : Jul 13, 2020, 7:58 AM IST

ರಾಂಚಿ (ಜಾರ್ಖಂಡ್): ಆರ್‌ಜೆಡಿ ಹಿರಿಯ ನಾಯಕ ಲಾಲೂ ಪ್ರಸಾದ್ ಯಾದವ್ ರಿಮ್ಸ್​ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅಲ್ಲಿ ಕೆಲ ನಾಯಕರೊಂದಿಗೆ ಸಭೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರಾಗೃಹದ ನಿಯಮಗಳನ್ನು ಉಲ್ಲಂಘಿಸಿ ದರ್ಬಾರ್​ ನಡೆಸುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಪ್ರತುಲ್​ ಶಾಹ್ದಿಯೋ ಆರೋಪಿಸಿದ್ದಾರೆ.

ಈ ಹಿಂದೆ ಮೇವಿನ ಹಗರಣಕ್ಕೆ ಸಂಬಂಧಿಸಿದಂತೆ ಲಾಲೂ ಪ್ರಸಾದ್​ ಯಾದವ್​ಗೆ 14 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಕೋರ್ಟ್​ ಆದೇಶಿಸಿತ್ತು. ಆದರೆ ಅನಾರೋಗ್ಯದ ಹಿನ್ನೆಲೆಯಲ್ಲಿ ತಮ್ಮ ಶಿಕ್ಷೆಯ ಬಹುಪಾಲು ಭಾಗವನ್ನು ಅವರು ರಿಮ್ಸ್​ನಲ್ಲಿ ಕಳೆಯುತ್ತಿದ್ದಾರೆ.

ಸದ್ಯ ಪ್ರತುಲ್​ ಫೇಸ್​ಬುಕ್​ನಲ್ಲಿ ಲಾಲೂ ಪ್ರಸಾದ್​ ಅವರ ಫೋಟೋವೊಂದನ್ನ ಪೋಸ್ಟ್​ ಮಾಡಿದ್ದು, ಜೈಲಿನ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ.

"ಜೈಲಿನ ನಿಯಮಗಳನ್ನು ಬಹಿರಂಗವಾಗಿ ಉಲ್ಲಂಘಿಸುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿಯೂ ಮಾಜಿ (ಬಿಹಾರ)ಮುಖ್ಯಮಂತ್ರಿ ಲಾಲೂ ಪ್ರಸಾದ್​ ಯಾದವ್​ ದರ್ಬಾರ್​ ಮಾಡುತ್ತಿದ್ದಾರೆ. ಕ್ಷಮಿಸಿ - ಅವರ ಜೊತೆ ಆರೋಗ್ಯ ಸಚಿವ ಸಚಿವ ಬನ್ನಾ ಗುಪ್ತಾ ಜಿ ಅವರೂ ಇದ್ದಾರೆ. ಅವರು ಮೊಬೈಲ್​ನಲ್ಲಿ ಮಾತನಾಡುತ್ತಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಿ ಗೌರವಾನ್ವಿತ ಮುಖ್ಯಮಂತ್ರಿಗಳೇ" ಎಂದು ಅಲ್ಲಿನ ಸಿಎಂಗೆ ಬಿಜೆಪಿ ವಕ್ತಾರರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ವೊಂದನ್ನ ಮಾಡಿ ಒತ್ತಾಯಿಸಿದ್ದಾರೆ.

Last Updated : Jul 13, 2020, 7:58 AM IST

ABOUT THE AUTHOR

...view details