ಜೈಪುರ(ರಾಜಸ್ಥಾನ): ಮದ್ಯ ದೊರೆ ವಿಜಯ್ ಮಲ್ಯ ಅವರ ಮನವಿಯನ್ನು ಲಂಡನ್ ಹೈಕೋರ್ಟ್ ತಿರಸ್ಕರಿಸಿದ ನಂತರ ಐಪಿಎಲ್ ಮಾಜಿ ಆಯುಕ್ತ ಲಲಿತ್ ಮೋದಿ ಅವರು ಭಾರತದಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಎದುರಿಸಲು ಭಾರತಕ್ಕೆ ಮರಳುವ ಸಾಧ್ಯತೆಗಳಿವೆ.
ಐಪಿಎಲ್ ಪಿತಾಮಹ ಲಲಿತ್ ಮೋದಿ ಭಾರತಕ್ಕೆ ಮರಳಲಿರುವ ಸಾಧ್ಯತೆ ಬಿಚ್ಚಿಟ್ಟ ವಕೀಲ - ಮದ್ಯ ದೊರೆ ವಿಜಯ್ ಮಲ್ಯ
ಜಾರಿ ನಿರ್ದೇಶನಾಲಯವು ಈಗಾಗಲೇ ಲಲಿತ್ ಮೋದಿ ವಿರುದ್ಧ ಪ್ರಕರಣಗಳನ್ನು ದಾಖಲಿಸಿದೆ. ವಾರಂಟ್ ಕೂಡ ಹೊರಡಿಸಿದೆ. ಹೀಗಾಗಿ ಲಲಿತ್ ಮೋದಿ ಅವರು ಭಾರತದಲ್ಲಿ ಕೆಲವು ಪ್ರಕರಣಗಳನ್ನು ಎದುರಿಸಲು ತವರಿಗೆ ಮರಳುವ ಸಾಧ್ಯತೆಗಳಿವೆ ಎಂದು ವಕೀಲ ಅಜಯ್ ಕುಮಾರ್ ಜೈನ್ ತಿಳಿಸಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ವಕೀಲ ಅಜಯ್ ಕುಮಾರ್ ಜೈನ್, "ಜಾರಿ ನಿರ್ದೇಶನಾಲಯವು ಈಗಾಗಲೇ ಲಲಿತ್ ಮೋದಿ ವಿರುದ್ಧ ಪ್ರಕರಣಗಳನ್ನು ದಾಖಲಿಸಿದೆ. ವಾರಂಟ್ ಹೊರಡಿಸಿದೆ" ಎಂದು ಹೇಳಿದರು.
ಭಾರತದ ಧ್ವಜಕ್ಕೆ ಅಗೌರವ ತೋರಿದ ಪ್ರಕರಣ ಸಂಬಂಧ ಲಲಿತ್ ಮೋದಿ ವಿರುದ್ಧ ಜೈಪುರದಲ್ಲಿ ಕೇಸ್ ದಾಖಲಾಗಿದೆ. ಜೊತೆಗೆ ಜೈಪುರದಲ್ಲಿ ಆತನ ವಿರುದ್ಧ ಇನ್ನೂ ಎರಡು ಪ್ರಕರಣಗಳು ದಾಖಲಾಗಿವೆ. ಭಾರತದಲ್ಲಿ ಐಪಿಎಲ್ ಪ್ರಾರಂಭಿಸಿದ ಲಲಿತ್ ಮೋದಿ ಅವರ ವಿರುದ್ಧ 2010 ರಲ್ಲಿ ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿವೆ. ಇದಲ್ಲದೆ ಲಲಿತ ಮೋದಿ ಅವರು ಮಾರಿಷಸ್‌ನ ಕಂಪನಿಯೊಂದಕ್ಕೆ 425 ಕೋಟಿ ಐಪಿಎಲ್ ಗುತ್ತಿಗೆ ನೀಡಿದ್ದು, ಈ ಒಪ್ಪಂದದ ವೇಳೆ ಅವರಿಗೆ 125 ಕೋಟಿ ಕಮಿಷನ್ ಸಿಕ್ಕಿದೆ ಎಂದು ಆರೋಪಿಸಲಾಗಿದೆ.