ಕುಲ್ಲು (ಹಿಮಾಚಲ ಪ್ರದೇಶ):ಅಕ್ಟೋಬರ್ 3ರಂದು ಅಟಲ್ ಸುರಂಗವನ್ನು ಉದ್ಘಾಟಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹಿಮಾಚಲ ಪ್ರದೇಶದ ಲಾಹೌಲ್ ಮತ್ತು ಮನಾಲಿಗೆ ಭೇಟಿ ನೀಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಅಲ್ಲಿನ ಬುಡಕಟ್ಟು ಸಂಸ್ಕೃತಿಯಂತೆ ಸ್ವಾಗತಿಸಲು ರಾಜ್ಯ ಸರ್ಕಾರವೂ ಸಕಲ ಸಿದ್ಧತೆ ಮಾಡಿಕೊಂಡಿದೆ.
ಹಿಮಾಚಲಕ್ಕೆ ಪ್ರಧಾನಿ ಭೇಟಿ ಸಾಧ್ಯತೆ: ಮೋದಿಗಾಗಿ ತಯಾರಾಗಿವೆ ಸಿಹಿ ಗೆಣಸಿನ ಕಡುಬುಗಳು - Himachala Pradesh News
ಅಟಲ್ ಸುರಂಗ ಮಾರ್ಗ ಉದ್ಘಾಟಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಹಿಮಾಚಲ ಪ್ರದೇಶದ ಲಾಹೌಲ್ ಮತ್ತು ಮನಾಲಿಗೆ ಭೇಟಿ ನೀಡುವ ಸಾಧ್ಯತೆಯಿದೆ. ಹೀಗಾಗಿ ಅಲ್ಲಿನ ಸರ್ಕಾರ ಬುಡಕಟ್ಟು ಸಂಪ್ರದಾಯದಂತೆ ಅವರನ್ನು ಸ್ವಾಗತಿಸಲು ತೀರ್ಮಾನಿಸಿದೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ಮೋದಿ ಭೇಟಿಯ ಸಮಯದಲ್ಲಿ ಅಲ್ಲಿನ ಸಾಂಪ್ರದಾಯಿಕ ಭಕ್ಷ್ಯಗಳನ್ನ ನೀಡುವ ಯೋಜನೆ ಮಾಡಲಾಗಿದೆ. ಕುಲ್ಲವಿ ಸಂಪ್ರದಾಯದ ಪ್ರಕಾರ ಪ್ರಧಾನಿ ಅವರನ್ನು ಮನಾಲಿಯಲ್ಲಿ ಸ್ವಾಗತಿಸಲಾಗುವುದು. ಇನ್ನು ಲಾಹೌಲ್ ಕಣಿವೆಯಲ್ಲಿ ಲಾಹೌಲಿ ಸಂಪ್ರದಾಯದಂತೆ ಸ್ವಾಗತಿಸಲಿದ್ದಾರೆ.
ಮನ್ನಾ (ಒಂದು ರೀತಿಯ ಖಾದ್ಯ) ಮತ್ತು ಕೆಂಪುಗೆಣಸು ಜೊತೆಗೆ ಸ್ಥಳೀಯ ಪಾಕ ಪದ್ಧತಿಯನ್ನು ತುಪ್ಪದೊಂದಿಗೆ ನೀಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಿಮಾಚಲದ ಬಗ್ಗೆ ಗಾಢವಾದ ಪ್ರೀತಿ ಇದೆ. ಇನ್ನು ಹಿಮಾಚಲದ ಬಿಜೆಪಿಯ ಉಸ್ತುವಾರಿ ವಹಿಸಿಕೊಂಡಿದ್ದ ಅವರು ಇಲ್ಲಿಗೆ ಭೇಟಿ ನೀಡಲಿದ್ದಾರೆ.