ಕರ್ನಾಟಕ

karnataka

ETV Bharat / bharat

ಪೊಲೀಸ್​ ಠಾಣೆ ಎದುರೇ ಬೆಂಕಿ ಹಚ್ಚಿಕೊಂಡು ಪ್ರಾಣ ಬಿಟ್ಟ ಮಹಿಳೆ... ವಿಡಿಯೋ ವೈರಲ್​!

ಮಧ್ಯ ವಯಸ್ಸಿನ ಮಹಿಳೆಯೊಬ್ಬಳು ಪೊಲೀಸ್​ ಠಾಣೆ ಎದುರೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

lady suicide at front of Hyderabad
ಪೊಲೀಸ್​ ಠಾಣೆ ಎದುರೇ ಬೆಂಕಿ ಹಚ್ಚಿಕೊಂಡು ಪ್ರಾಣ ಬಿಟ್ಟ ಮಹಿಳೆ

By

Published : Jan 1, 2020, 7:07 PM IST

Updated : Jan 2, 2020, 7:49 AM IST

ಪಂಜಗುಟ್ಟಾ(ಹೈದರಾಬಾದ್​):ಮಹಿಳೆಯೊಬ್ಬಳು ಪೊಲೀಸ್ ಠಾಣೆ ಎದುರೇ ಬೆಂಕಿ ಹಂಚಿಕೊಂಡಿದ್ದ ಮಹಿಳೆ ಇಂದು ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿರುವ ಘಟನೆ ಹೈದರಾಬಾದ್​​ನ ಪಂಜಗುಟ್ಟಾದಲ್ಲಿ ನಡೆದಿದೆ.

ಪೊಲೀಸ್​ ಠಾಣೆ ಎದುರೇ ಬೆಂಕಿ ಹಚ್ಚಿಕೊಂಡು ಪ್ರಾಣ ಬಿಟ್ಟ ಮಹಿಳೆ

2013ರಲ್ಲಿ ತಿರುಪತಿಯಲ್ಲಿ ಪ್ರವೀಣ್​ ಎಂಬ ವ್ಯಕ್ತಿಯೊಂದಿಗೆ ಈ ಮಹಿಳೆ ಪರಿಚಯಿಸಿಕೊಂಡು ಹೈದರಾಬಾದ್​ಗೆ ಆಗಮಿಸಿದ್ದರಂತೆ. ಜತೆಗೆ ಪ್ರವೀಣ್​ ಜ್ಯುವೆಲ್ಲರಿ ಶಾಪ್​​ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ತನ್ನ ಶಾಪ್​​ನಲ್ಲಿ ಚಿನ್ನ ಕಳ್ಳತನ ಮಾಡಿದ್ದಾರೆ ಎಂದು ಲೋಕೇಶ್ವರಿ ವಿರುದ್ಧ ಪ್ರವೀಣ್​ ದೂರು ದಾಖಲು ಮಾಡಿದ್ದ. ಈ ವೇಳೆ ಆಕೆಯನ್ನ ಬಂಧನ ಮಾಡಿದ್ದ ಪೊಲೀಸರು ತದನಂತರ ಜಾಮೀನಿನ ಮೇಲೆ ರಿಲೀಸ್​ ಮಾಡಿದ್ದರು. ಇದಾದ ಬಳಿಕ ಇಬ್ಬರು ಮೇಲಿಂದ ಮೇಲೆ ಜಗಳವಾಡಿಕೊಂಡಿದ್ದರು. ಈಕೆ ಮೂಲತಃ ತಮಿಳುನಾಡಿನವರು ಎಂದು ತಿಳಿದು ಬಂದಿದೆ.

ಪೊಲೀಸ್​ ಠಾಣೆ ಎದುರೇ ಬೆಂಕಿ ಹಚ್ಚಿಕೊಂಡು ಪ್ರಾಣ ಬಿಟ್ಟ ಮಹಿಳೆ

ನಿನ್ನೆ ಪ್ರವೀಣ್​​ನನ್ನು ಭೇಟಿ ಮಾಡಲು ತೆರಳಿದ್ದ ವೇಳೆ ಸಾಧ್ಯವಾಗದೇ ಹೋಗಿದ್ದರಿಂದ ನೇರವಾಗಿ ಪಂಜಾಗುಟ್ಟಾ ಪೊಲೀಸ್​ ಠಾಣೆಗೆ ಬಂದು ಪೆಟ್ರೋಲ್​ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ನಡೆಸಿದ್ದಳು. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.

Last Updated : Jan 2, 2020, 7:49 AM IST

ABOUT THE AUTHOR

...view details