ನವದೆಹಲಿ:ಎಂಟನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಯಲ್ಲಿ ಪೂರ್ವ ಲಡಾಖ್‌ನ ಎಲ್ಲ ಘರ್ಷಣೆ ಕೇಂದ್ರಗಳಿಂದ ಚೀನಾದ ಪಿಎಲ್‌ಎ ಸೈನ್ಯವನ್ನು ಸಮಗ್ರವಾಗಿ ಹೊರಹಾಕಲು ಭಾರತೀಯ ಸೇನೆಯು ಒತ್ತಡ ಹೇರಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪೂರ್ವ ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಭಾರತದ ಬದಿಯಲ್ಲಿರುವ ಚುಶುಲ್‌ನಲ್ಲಿ ಇಂದು ಬೆಳಗ್ಗೆ ಮಾತುಕತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಪೂರ್ವ ಲಡಾಕ್‌ನ ವಿವಿಧ ಪರ್ವತ ಸ್ಥಳಗಳಲ್ಲಿ ಸುಮಾರು 50,000 ಭಾರತೀಯ ಸೇನಾ ಪಡೆಗಳನ್ನು ಪ್ರಸ್ತುತ ಉನ್ನತ ಮಟ್ಟದ ಯುದ್ಧ ಸನ್ನದ್ಧತೆಯಲ್ಲಿ ನಿಯೋಜಿಸಲಾಗಿದೆ.
ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಕೂಡ ಸಮಾನ ಸಂಖ್ಯೆಯ ಸೈನಿಕರನ್ನು ನಿಯೋಜಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಕೆಲ ತಿಂಗಳಿಂದ ಉಭಯ ಸೇನೆಗಳ ನಡುವೆ ನಿರಂತರ ಮಾತುಕತೆ ನಡೆಯುತ್ತಲೇ ಇದೆ. ಆದರೆ ಚೀನಾ ಆಯಾಕಟ್ಟಿನ ಜಾಗದಿಂದ ಹಿಂದೆ ಸರಿಯಲು ಒಪ್ಪುತ್ತಿಲ್ಲ. ಚೀನಾ ಸೇನೆ ಸಂಪೂರ್ಣ ತೆರವಿನ ಬಳಿಕವೇ ಭಾರತೀಯ ಸೇನೆ ತನ್ನ ಜಾಗದಿಂದ ಹಿಂದೆ ಸರಿಯುವುದಾಗಿ ಪಟ್ಟು ಹಿಡಿದಿದೆ. ಹೀಗಾಗಿ ಬಿಕ್ಕಟ್ಟು ಹಾಗೆಯೇ ಮುಂದುವರೆದಿದೆ.