ಕರ್ನಾಟಕ

karnataka

ETV Bharat / bharat

ಯುಪಿಎ ಅವಧಿಯಲ್ಲಿ ಚೀನಾ ವಶವಾದ ಪ್ರದೇಶಗಳ ಪಟ್ಟಿ ರಿಲೀಸ್​: ರಾಗಾ ಟ್ವೀಟ್​ಗೆ ಲಡಾಖ್​ ಎಂಪಿ ಉತ್ತರ - ಯುಪಿಎ ಅವಧಿಯಲ್ಲಿ ಚೀನಾ ವಶಪಡಿಸಿಕೊಂಡ ಪ್ರದೇಶಗಳ ಪಟ್ಟಿ ಬಿಡುಗಡೆ

ಚೀನಾದೊಂದಿಗಿನ ಗಡಿ ನಿಲುಗಡೆಗೆ ಸಂಬಂಧಿಸಿದಂತೆ ಸರ್ಕಾರದ ಮೇಲೆ ಅನೇಕ ಬಾರಿ ವಾಗ್ದಾಳಿ ನಡೆಸಿದ ರಾಹುಲ್​ ಗಾಂಧಿಗೆ ಲಡಾಖ್​ನ ಬಿಜೆಪಿ ಸಂಸದ ಜಮಿಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಪ್ರತಿಕ್ರಿಯೆ ನೀಡಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ ಲಡಾಖ್​ನ ಯಾವೆಲ್ಲ ಭಾಗಗಳು ಚೀನಾಕ್ಕೆ ಸೇರಿವೆ ಎಂಬುದನ್ನು ನಮ್ಗ್ಯಾಲ್ ಪಟ್ಟಿ ಮಾಡಿದ್ದಾರೆ.

tweet
tweet

By

Published : Jun 10, 2020, 3:59 PM IST

ನವದೆಹಲಿ:ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಚೀನಾದೊಂದಿಗಿನ ಗಡಿ ನಿಲುಗಡೆಗೆ ಸಂಬಂಧಿಸಿದಂತೆ ಸರ್ಕಾರದ ಮೇಲೆ ಅನೇಕ ಬಾರಿ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ಲಡಾಖ್​ನ ಬಿಜೆಪಿ ಸಂಸದ ಜಮಿಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಪ್ರತಿಕ್ರಿಯಿಸಿದ್ದಾರೆ.

ಯುಪಿಎ ಸರ್ಕಾರದ ಅವಧಿಯಲ್ಲಿ ಲಡಾಖ್​ನ ಯಾವೆಲ್ಲ ಭಾಗಗಳು ಚೀನಾಕ್ಕೆ ಸೇರಿವೆ ಎಂದು ಜಮಿಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಪಟ್ಟಿ ಮಾಡಿದ್ದಾರೆ.

"ರಾಹುಲ್ ಗಾಂಧಿ ಮತ್ತು ಐಎನ್​ಸಿ ಇಂಡಿಯಾ ನನ್ನ ಉತ್ತರವನ್ನು ಸತ್ಯಾಂಶಗಳ ಆಧಾರದ ಮೇಲೆ ಒಪ್ಪುತ್ತಾರೆ ಮತ್ತು ಅವರು ಪುನಃ ದಾರಿ ತಪ್ಪಿಸಲು ಪ್ರಯತ್ನಿಸುವುದಿಲ್ಲ ಎಂದು ನಾನು ನಂಬುತ್ತೇನೆ"ಎಂದು ನಮ್ಗ್ಯಾಲ್ ಟ್ವೀಟ್ ಮಾಡಿದ್ದಾರೆ.

ಟ್ವೀಟ್‌ನೊಂದಿಗೆ, ಯುಪಿಎ ಆಡಳಿತದ ಅವಧಿಯಲ್ಲಿ ಚೀನಿಯರು ಆಕ್ರಮಿಸಿಕೊಂಡಿದ್ದಾರೆಂದು ಹೇಳಿಕೊಂಡ ಪ್ರದೇಶಗಳ ಪಟ್ಟಿಯನ್ನು ಒಳಗೊಂಡಿರುವ ಚಿತ್ರವನ್ನು ಅವರು ಲಗತ್ತಿಸಿದ್ದಾರೆ.

ABOUT THE AUTHOR

...view details