ಶ್ರೀನಗರ: ಚೀನಾದ ಎರಡು ವಾಹನಗಳು ಲಡಾಖ್‌ನ ಲೇಹ್ ಜಿಲ್ಲೆಯ ನ್ಯೋಮಾ ಬ್ಲಾಕ್‌ನ ಚಾಂಗ್‌ಥಾಂಗ್ ಪ್ರದೇಶಕ್ಕೆ ಬಂದಿವೆ ಎನ್ನಲಾದ ವಿಡಿಯೋ ಹೊರಬಿದ್ದಿದೆ. 5 ನಿಮಿಷ 26 ಸೆಕೆಂಡುಗಳ ವೈರಲ್ ವಿಡಿಯೋದಲ್ಲಿ, ಚೀನಾದ ವ್ಯಕ್ತಿಗಳು ಭಾರತೀಯ ಭೂಪ್ರದೇಶವನ್ನು ಪ್ರವೇಶಿಸಿ ಸ್ಥಳೀಯರೊಂದಿಗೆ ವಾದ ನಡೆಸುತ್ತಿರುವುದನ್ನು ಕಾಣಬಹುದು.
ಮಾಹಿತಿಯ ಪ್ರಕಾರ, ಸ್ಥಳೀಯ ಅಲೆಮಾರಿಗಳು ಈ ಪ್ರದೇಶದಲ್ಲಿ ಜಾನುವಾರುಗಳನ್ನು ಮೇಯಿಸಲು ಚೀನಿಯರು ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಆದರೆ ಸ್ಥಳೀಯರು ಅವರ ನಡೆಯನ್ನು ವಿರೋಧಿಸಿದ ನಂತರ ಅವರು ಹಿಂತಿರುಗಿದ್ದಾರೆ ಎನ್ನಲಾಗ್ತಿದೆ. ಆದ್ರೆ ಈ ಘಟನೆ ಯಾವಾಗ ನಡೆದಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.
ಭಾರತದ ಗಡಿ ಪ್ರವೇಶಿಸಿದ ಚೀನಾ ವಾಹನಗಳು - ವೈರಲ್ ವಿಡಿಯೋ ಈ ಘಟನೆಯ ಬಗ್ಗೆ ಭಾರತೀಯ ಸೇನೆಯು ಇನ್ನೂ ಹೇಳಿಕೆ ನೀಡದಿದ್ದರೂ, ಸ್ಥಳೀಯ ಕೌನ್ಸಿಲರ್ ಕೆಲವು ದಿನಗಳ ಹಿಂದೆ ಈ ಘಟನೆ ನಡೆದಿರುವುದನ್ನು ದೃಢಪಡಿಸಿದ್ದಾರೆ. ಗಾಲ್ವಾನ್ ಸಂಘರ್ಷದ ನಂತರ ಉಲ್ಬಣಗೊಂಡ ಭಾರತ ಮತ್ತು ಚೀನಾಗಡಿ ಗಡಿ ಬಿಕ್ಕಟ್ಟಿನ ಮಧ್ಯೆ ಈ ಘಟನೆ ನಡೆದಿದೆ.
"ಕೆಲವು ದಿನಗಳ ಹಿಂದೆ ಚೀನಾ ಎರಡು ವಾಹನಗಳು ನಮ್ಮ ಭೂಪ್ರದೇಶ ಪ್ರವೇಶಿಸಿವೆ. ಈ ಘಟನೆಯ ಬಗ್ಗೆ ನನ್ನ ಬಳಿ ಸಂಪೂರ್ಣ ಮಾಹಿತಿ ಇಲ್ಲ" ಎಂದು ಲಡಾಖ್ ಅಟಾನಮಸ್ ಹಿಲ್ ಡೆವೆಲಪ್ಮೆಂಟ್ ಕೌನ್ಸಿಲ್ನಲ್ಲಿ ನ್ಯೋಮಾ ಕ್ಷೇತ್ರವನ್ನು ಪ್ರತಿನಿಧಿಸುವ ಇಶೆ ಸ್ಪಾಲ್ಜಾಂಗ್ ದೂರವಾಣಿ ಮೂಲಕ 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.
"ನನಗೆ ಅರ್ಥವಾದ ಪ್ರಕಾರ, ಸ್ಥಳೀಯ ಅಲೆಮಾರಿಗಳು ಈ ಪ್ರದೇಶದಲ್ಲಿ ಜಾನುವಾರುಗಳನ್ನು ಮೇಯಿಸಲು ಚೀನಿಯರು ಆಕ್ಷೇಪಣೆಗಳನ್ನು ವ್ಯಕ್ತಪಡಿಸುತ್ತಿದ್ದರು" ಎಂದು ಹೇಳಿದ್ದಾರೆ.