ಪನ್ನಾ(ಮಧ್ಯಪ್ರದೇಶ):ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಗಣಿ ಪ್ರದೇಶದಲ್ಲಿ ಕಾರ್ಮಿಕ ಆನಂದಿಲಾಲ್ ಕುಶ್ವಾಹ ಅವರು 10.69 ಕ್ಯಾರೆಟ್ ವಜ್ರವನ್ನು ಶೋಧಿಸಿದ್ದಾರೆ. ಇದು ಜುಲೈ ತಿಂಗಳಲ್ಲಿಯೇ ಅವರು ನಡೆಸಿರುವ ಎರಡನೆಯ ಶೋಧವಾಗಿದೆ.
ಅಧಿಕಾರಿಗಳ ಪ್ರಕಾರ, ಈ ರೀತಿಯ ಸಣ್ಣ ಪ್ರಮಾಣದ ವಜ್ರಗಳು ಕಂಡುಬರುತ್ತಿರುವುದು ನಿಜಕ್ಕೂ ವಿಶೇಷ. ಅಂತಹ ಹೆಚ್ಚಿನ ತುಣುಕುಗಳ ಶೋಧನೆಯು ಹೆಚ್ಚುತ್ತಿರುವ ವಜ್ರದ ಬೇಡಿಕೆಯನ್ನು ಪೂರೈಸುತ್ತದೆ. ಕುಶ್ವಾಹಾ ಅವರ ಶೋಧನೆಯು ಸಣ್ಣ ವಜ್ರಗಳದ್ದಾಗಿದ್ದು, ಇವುಗಳ ಮೌಲ್ಯ ಸುಮಾರು 50-80 ಲಕ್ಷ ರೂಪಾಯಿ ಎನ್ನಲಾಗುತ್ತಿದೆ.