ಕರ್ನಾಟಕ

karnataka

ETV Bharat / bharat

3.5 ಕೋಟಿ ಕಟ್ಟಡ ಕಾರ್ಮಿಕರಿಗೆ ಸಹಾಯ ಧನ ನೀಡಲು ರಾಜ್ಯಗಳಿಗೆ ಕೇಂದ್ರದ ನಿರ್ದೇಶನ.. - ನೇರ ನಗದು ವರ್ಗಾವಣೆ

ಕೋವಿಡ್​-19 ಬಿಕ್ಕಟ್ಟಿನಿಂದ ಜೀವನೋಪಾಯಕ್ಕಾಗಿ ಪರದಾಡುತ್ತಿರುವ ಕಟ್ಟಡ ಕಾರ್ಮಿಕರ ಬೆಂಬಲಕ್ಕೆ ನಿಂತಿರುವ ಕೇಂದ್ರ ಸರ್ಕಾರ, ಎಲ್ಲ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಸೂಕ್ತ ಪ್ರಮಾಣದ ಹಣ ಸಂದಾಯ ಮಾಡುವಂತೆ ಎಲ್ಲ ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ.

Breaking News

By

Published : Mar 25, 2020, 11:37 AM IST

ಹೊಸದಿಲ್ಲಿ :ದೇಶದಲ್ಲಿನ 3.5 ಕೋಟಿ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ತಕ್ಷಣ ಸಹಾಯ ಧನ ಬಿಡುಗಡೆ ಮಾಡಬೇಕೆಂದು ಕೇಂದ್ರ ಕಾರ್ಮಿಕ ಖಾತೆ ಸಚಿವ ಸಂತೋಷ್‌ ಕುಮಾರ್‌ ಗಂಗ್ವಾರ್ ಮಂಗಳವಾರ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದ್ದಾರೆ. ಕೋವಿಡ್​-19ನಿಂದ ದೇಶಾದ್ಯಂತ ಲಾಕ್​ಡೌನ್​ ವಿಧಿಸಲಾಗಿದ್ದರಿಂದ ಕೆಲಸ ಕಳೆದುಕೊಂಡು ಆದಾಯರಹಿತರಾಗಿರುವ ಕಾರ್ಮಿಕರ ಜೀವನೋಪಾಯಕ್ಕಾಗಿ ಈ ಕ್ರಮಕೈಗೊಳ್ಳಲಾಗಿದೆ.

ಕಟ್ಟಡ ನಿರ್ಮಾಣ ಕಾರ್ಮಿಕರು ಮತ್ತು ಇತರೆ ಕಾರ್ಮಿಕರ 1996ರ ಕಾಯ್ದೆ 60ರ ಪ್ರಕಾರ, ಸೆಕ್ಷನ್ 22(1) (h) ಕಾಯ್ದೆಯಡಿ ಈ ನಿರ್ದೇಶನ ಹೊರಡಿಸಲಾಗಿದೆ. ಕಟ್ಟಡ ಕಾರ್ಮಿಕರ ಬ್ಯಾಂಕ್ ಖಾತೆಗೆ ತುರ್ತಾಗಿ ಅಗತ್ಯವಿರುವಷ್ಟು ಮೊತ್ತ ಜಮೆ ಮಾಡುವಂತೆ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ. ಕಾರ್ಮಿಕ ಕಲ್ಯಾಣ ಮಂಡಳಿಯ ಮೂಲಕ ಸಂಗ್ರಹ ಮಾಡಲಾದ ಸೆಸ್​ ಮೊತ್ತದಿಂದ ಕಾರ್ಮಿಕರ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಹಣ ಸಂದಾಯ ಮಾಡುವಂತೆ ನಿರ್ದೇಶಿಸಲಾಗಿದೆ.

ಪ್ರಸ್ತುತ ದೇಶದಲ್ಲಿ 52 ಸಾವಿರ ಕೋಟಿ ರೂಪಾಯಿ ಸೆಸ್​ ಮೊತ್ತ ಸಂಗ್ರಹವಿದೆ. ಎಷ್ಟು ಮೊತ್ತ ನೀಡಬೇಕೆಂಬುದನ್ನು ನಿರ್ಧರಿಸುವ ವಿವೇಚನೆಯನ್ನು ಆಯಾ ರಾಜ್ಯ ಸರ್ಕಾರಗಳಿಗೇ ಬಿಡಲಾಗಿದೆ.

ABOUT THE AUTHOR

...view details