ಕರ್ನಾಟಕ

karnataka

ETV Bharat / bharat

ಮೊದಲ ಬಾರಿಗೆ ಎಲೆಕ್ಟ್ರಾನಿಕ್ ವಾಯು ಶುದ್ಧೀಕರಣ ಮಾಸ್ಕ್ ಶೋಧನೆ - ಎಲೆಕ್ಟ್ರಾನಿಕ್ ವಾಯು ಶುದ್ಧೀಕರಣ ಮಾಸ್ಕ್ ಶೋಧನೆ

ಕುರಿನ್ ಸಿಸ್ಟಂ ಸಂಸ್ಥೆಯು ಮೊದಲ ಬಾರಿಗೆ ಎಲೆಕ್ಟ್ರಾನಿಕ್ ವಾಯು ಶುದ್ಧೀಕರಣ ಮಾಸ್ಕ್ ಪರಿಚಯಿಸಿದೆ. ಸೌಮ್ಯ ಉಸಿರಾಟದ ತೊಂದರೆ ಹೊಂದಿರುವ ರೋಗಿಗಳಿಗೆ ಸಹಾಯ ಮಾಡಲು ಆಸ್ಪತ್ರೆಗಳಿಗೆ ಮಾಸ್ಕ್​ಗಳನ್ನು ವ್ಯಾಪಕವಾಗಿ ಒದಗಿಸಲಾಗುತ್ತಿದೆ.

first electronic air purification mask called Kurin
ಎಲೆಕ್ಟ್ರಾನಿಕ್ ವಾಯು ಶುದ್ಧೀಕರಣ ಮಾಸ್ಕ್

By

Published : Sep 13, 2020, 1:23 PM IST

ನವದೆಹಲಿ:ಕೊರೊನಾ ಸೋಂಕು ಹರಡುವುದನ್ನು ತಡೆಯಲು ಮಾಸ್ಕ್ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ, ಕುರಿನ್ ಸಿಸ್ಟಂ ಸಂಸ್ಥೆಯು ಮೊದಲ ಬಾರಿಗೆ ಎಲೆಕ್ಟ್ರಾನಿಕ್ ವಾಯು ಶುದ್ಧೀಕರಣ ಮಾಸ್ಕ್ ಪರಿಚಯಿಸಿದೆ.

ಈ ಮಾಸ್ಕ್​ ಬಗ್ಗೆ ಮಾನಾಡಿರುವ, ಕುರಿನ್ ಸಿಸ್ಟಂ ಸಹ ಸಂಸ್ಥಾಪಕ ಪವನೀತ್ ಪುರಿ, ಸಾಮಾನ್ಯ N95 ಮಾಸ್ಕ್​ಗಳನ್ನು ಧರಿಸಿ ನೀವು ಗಾಳಿಯನ್ನು ಉಸಿರಾಡುವಾಗಲೆಲ್ಲಾ ಸ್ವಲ್ಪ ಕಷ್ಟವಾಗುತ್ತದೆ. ಎಲ್ಲಾ N95 ಮಾಸ್ಕ್​ಗಳು ತುಂಬಾ ಬಿಗಿಯಾಗಿರುತ್ತವೆ, ಯಾವುದೇ ಕಣಗಳು ಹಾದುಹೋಗುವುದಿಲ್ಲ. ಉಸಿರಾಟದ ತೊಂದರೆಗಳನ್ನು ತಪ್ಪಿಸಲು, ಹೊಸ ಮಾಸ್ಕ್​ನಲ್ಲಿ ಬಾಯಿಯ ಮುಂದೆ ಫ್ಯಾನ್ ಇರುವ ಮೋಟಾರ್ ಇದೆ, ಇದರಲ್ಲಿ ಫಿಲ್ಟರ್ ಕೂಡ ಇದೆ ಎಂದಿದ್ದಾರೆ.

ಮಾಸ್ಕ್​ಗೆ ( Kurin Atom Ver 2.0.4) ಸಂಬಂಧಿಸಿದಂತೆ ಕಂಪನಿಯು ಐಸಿಎಂಆರ್​ನಿಂದ ಅನುಮೋದನೆ ಪಡೆದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪುರಿ, ನಮಗೆ ಐಸಿಎಂಆರ್ ಅನುಮೋದನೆ ಅಗತ್ಯವಿಲ್ಲ, ನಮಗೆ ಬಿಐಎಸ್ ಅನುಮೋದನೆ ಬೇಕು. ಇದು ಎಲೆಕ್ಟ್ರಾನಿಕ್ ಸಾಧನವಾಗಿರುವುದರಿಂದ, ಇದು ಪೋರ್ಟಬಲ್ ಏರ್ ಪ್ಯೂರಿಫೈಯರ್ ಆಗಿದೆ. ಇದು ಮಾಸ್ಕ್​ ಆಗಿ ಅರ್ಹತೆ ಪಡೆಯುವುದಿಲ್ಲ ಎಂದಿದ್ದಾರೆ.

ಮೊದಲು ಕುರಿನ್ ಆಟಮ್( Kurin Atom Ver 2.0.4) ಅನ್ನು 2017 ರಲ್ಲಿ ಬಿಡುಗಡೆ ಮಾಡಲಾಯಿತು. ಆದರೆ ಆ ಸಮಯದಲ್ಲಿ, ಇದು ಕೇವಲ ಪೋರ್ಟಬಲ್ ಏರ್ ಪ್ಯೂರಿಫೈಯರ್ ಆಗಿತ್ತು ಮತ್ತು ಅದರ ವಿನ್ಯಾಸದಿಂದಾಗಿ ಮಕ್ಕಳು ಆರಂಭದಲ್ಲಿ ಮಾಸ್ಕ್​ಗಳನ್ನು ಧರಿಸಲು ಇಷ್ಟಪಡುತ್ತಿರಲಿಲ್ಲ ಎಂದಿದ್ದಾರೆ.

ಆದರೆ ಈ ಸಮಯದಲ್ಲಿ ನಾವು ಹೊರಹಾಕಿದ ಇಂಗಾಲದ ಡೈಆಕ್ಸೈಡ್‌ ಮತ್ತು ವೆಂಟಿಲೇಷನ್ ಬಗ್ಗೆಯೂ ಕೆಲಸ ಮಾಡಿದ್ದೇವೆ. ಯಾವುದೇ ಏರೋಸಾಲ್‌ಗಳು ಖಾಲಿಯಾಗದಂತೆ ಉಸಿರಾಡುವ ಗಾಳಿಯನ್ನು ಸಹ ಫಿಲ್ಟರ್ ಮಾಡಲಾಗುತ್ತದೆ. ಇದು ಈ ಸಮಯದಲ್ಲಿ ದೊಡ್ಡ ಕಾಳಜಿಯಾಗಿದೆ ಎಂದು ಅವರು ಹೇಳಿದ್ದಾರೆ.

ಕುರಿನ್ ಆಟಮ್ ಅತ್ಯಾಧುನಿಕ ಮೋಟಾರ್ ಮತ್ತು ಫ್ಯಾನ್‌ನೊಂದಿಗೆ ಅಳವಡಿಸಲಾಗಿದ್ದು, ಅದು ಶುದ್ಧ ಗಾಳಿಯ ಸೇವನೆಗೆ ಸಹಾಯ ಮಾಡುತ್ತದೆ. ಪ್ರಕ್ರಿಯೆಯ ಮೊದಲ ಹಂತದಲ್ಲಿ, ಮಾಸ್ಕ್​ನ ಮುಂಭಾಗದಲ್ಲಿ ಗಾಳಿಯನ್ನು ಹೀರಿಕೊಳ್ಳುತ್ತದೆ ಮತ್ತು ಅದು ನಾಲ್ಕು ಪದರಗಳ ಶೋಧನೆ ಮೂಲಕ ಹಾದು ಹೋಗುತ್ತದೆ.

ಸೌಮ್ಯ ಉಸಿರಾಟದ ತೊಂದರೆ ಹೊಂದಿರುವ ರೋಗಿಗಳಿಗೆ ಸಹಾಯ ಮಾಡಲು ಆಸ್ಪತ್ರೆಗಳಿಗೆ ಮಾಸ್ಕ್​ಗಳನ್ನು ವ್ಯಾಪಕವಾಗಿ ಒದಗಿಸಲಾಗುತ್ತಿದೆ ಮತ್ತು ಶ್ವಾಸಕೋಶದ ಕಾಯಿಲೆಗಳಿಂದ ಚೇತರಿಸಿಕೊಳ್ಳಲು ಸಹಾಯ ಮಾಡುತ್ತಿದೆ.

ABOUT THE AUTHOR

...view details