ನವದೆಹಲಿ: 2017ರಲ್ಲಿನ ಉನ್ನಾವೋ ಅತ್ಯಾಚಾರ ಪ್ರಕರಣ ಹಾಗೂ ತದನಂತರ ನಡೆಸಿದ್ದ ಸಂತ್ರಸ್ತೆಯ ತಂದೆ ಕೊಲೆ ಪ್ರಕರಣದಲ್ಲೂ ಬಿಜೆಪಿ ಉಚ್ಛಾಟಿತ ಶಾಸಕ ಕುಲ್ದೀಪ್ ಸಿಂಗ್ ತಪ್ಪಿತಸ್ಥ ಎಂದು ತೀಸ್ ಹಜಾರಿ ನ್ಯಾಯಾಲಯ ತೀರ್ಪು ಹೊರಡಿಸಿದೆ.
ಉನ್ನಾವೋ ಅತ್ಯಾಚಾರ ಕೇಸ್... ಬಿಜೆಪಿ ಉಚ್ಛಾಟಿತ ಶಾಸಕ ಕುಲ್ದೀಪ್ ಸಿಂಗ್ ತಪ್ಪಿತಸ್ಥ ಎಂದು ತೀರ್ಪು! - ಉನ್ನಾವೋ ಅತ್ಯಾಚಾರ ಕೇಸ್
ಉನ್ನಾವೋ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಈಗಾಗಲೇ ಆರೋಪಿಯಾಗಿರುವ ಬಿಜೆಪಿ ಉಚ್ಛಾಟಿತ ಶಾಸಕ ಕುಲ್ದೀಪ್ ಸಿಂಗ್, ಅವರ ತಂದೆ ಕೊಲೆ ಪ್ರಕರಣದಲ್ಲೂ ಭಾಗಿಯಾಗಿದ್ದು ಖಚಿತಗೊಂಡಿದೆ. ಈ ಸಂಬಂಧ ವಾದ - ಪ್ರತಿವಾದ ಆಲಿಸಿದ ಕೋರ್ಟ್ ಸಿಂಗ್ ತಪ್ಪಿತಸ್ಥ ಎಂದು ತೀರ್ಪು ನೀಡಿದೆ.
ಉನ್ನಾವೋ ಅತ್ಯಾಚಾರ ಕೇಸ್
ಉನ್ನಾವೋ ಅಪ್ರಾಪ್ತೆ ಬಾಲಕಿ ಅಪಹರಣ ಹಾಗೂ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉಚ್ಚಾಟಿತ ಬಿಜೆಪಿ ಶಾಸಕ ಕುಲದೀಪ್ ಸೆಂಗರ್ ದೋಷಿ ಎಂದು ದೆಹಲಿಯ ತೀಸ್ ಹಜಾರಿ ನ್ಯಾಯಾಲಯ ಇಂದು ತೀರ್ಪು ನೀಡಿದ್ದು, ಇದೀಗ ಸಂತ್ರಸ್ತೆಯ ತಂದೆ ಕೊಲೆ ಪ್ರಕರಣದಲ್ಲೂ ಇವರ ಕೈವಾಡವಿರುವುದು ಖಚಿತಗೊಂಡಿರುವ ಕಾರಣ ಕೋರ್ಟ್ ಈ ತೀರ್ಪು ಹೊರಹಾಕಿದೆ.
ಇವರ ಜತೆಗೆ ಮತ್ತೆ ಏಳು ಮಂದಿ ಆರೋಪಿಗಳೂ ಸಹ ದೋಷಿ ಎಂದಿರುವ ಕೋರ್ಟ್, ನಾಲ್ವರನ್ನ ಪ್ರಕರಣದಿಂದ ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ.