ಕರ್ನಾಟಕ

karnataka

ETV Bharat / bharat

ಆತಂಕ ಮುಕ್ತ ವಾತಾವರಣವಿದ್ರೆ ಜಾಧವ್​ ಜತೆ ಮಾತುಕತೆ: ಪಾಕ್​ಗೆ ಭಾರತದ ಷರತ್ತು - ಪಾಕಿಸ್ತಾನ

ಅಂತಾರಾಷ್ಟ್ರೀಯ ನ್ಯಾಯಾಲಯದ ಆದೇಶದನ್ವಯ ಭಾರತೀಯ ಅಧಿಕಾರಿಗಳು ಕುಲಭೂಷಣ್ ಜಾಧವ್‌ ಅವರನ್ನು ಇಂದು (ಶುಕ್ರವಾರ) ಭೇಟಿಯಾಗಬಹುದು ಎಂದು ಪಾಕಿಸ್ತಾನ ನಿನ್ನೆ ಹೇಳಿತ್ತು. ಈ ಅವಕಾಶವನ್ನು ಪರಿಗಣಿಸಿರುವುದರ ಜತೆಗೆ, ಅನಿರ್ಬಂಧಿತ ಭೇಟಿಗೆ ಅವಕಾಶ ನೀಡಬೇಕು ಎಂದು ಭಾರತ ಹೇಳಿದೆ.

Kulbhushan Jadhav

By

Published : Aug 2, 2019, 4:51 PM IST

ನವದೆಹಲಿ: ಪಾಕಿಸ್ತಾನವು ಕುಲಭೂಷಣ್ ಜಾಧವ್ ಜತೆ ಮಾತುಕತೆಗೆ ಅವಕಾಶ ನೀಡಿರುವುದನ್ನು ಪರಿಗಣಿಸಿರುವ ಭಾರತದ ವಿದೇಶಾಂಗ ಇಲಾಖೆ ಷರತ್ತು ವಿಧಿಸಿದೆ.

ಅಂತಾರಾಷ್ಟ್ರೀಯ ನ್ಯಾಯಾಲಯದ ಆದೇಶದನ್ವಯ ಭಾರತೀಯ ಅಧಿಕಾರಿಗಳು ಕುಲಭೂಷಣ್ ಅವರನ್ನು ಇಂದು ಭೇಟಿಯಾಗಬಹುದು ಎಂದು ಪಾಕ್‌ ನಿನ್ನೆ ಹೇಳಿತ್ತು. ಈ ಅವಕಾಶವನ್ನು ಪರಿಗಣಿಸಿರುವುದರ ಜತೆಗೆ, ಅನಿರ್ಬಂಧಿತ ಭೇಟಿಗೆ ಅವಕಾಶ ನೀಡಬೇಕು. ಪ್ರತೀಕಾರದ, ಆತಂಕ ಮುಕ್ತ ವಾತಾವರಣ ಕಲ್ಪಿಸಬೇಕು ಎಂದು ಕೇಳಿದೆ. ಈ ಬಗ್ಗೆ ಪಾಕಿಸ್ತಾನದ ಪ್ರತಿಕ್ರಿಯೆ ನೋಡಿಕೊಂಡು ಭಾರತ ಮುಂದಿನ ಹೆಜ್ಜೆ ಇಡಲಿದೆ.

ಗೂಢಚರ್ಯೆ ಆರೋಪದ ಮೇಲೆ ಬಂಧಿರಾಗಿರುವ ಕುಲಭೂಷಣ್ ಜಾಧವ್​ಗೆ ಪಾಕ್ ವಿಧಿಸಿರುವ ಮರಣದಂಡನೆ ಶಿಕ್ಷೆಗೆ ಅಂತಾರಾಷ್ಟ್ರೀಯ ನ್ಯಾಯಾಲಯ ತಡೆ ನೀಡಿದೆ. ಈ ಆದೇಶವನ್ನು ಪುನರ್​ ಪರಿಶೀಲಿಸಬೇಕೆಂಬ ನಿರ್ದೇಶನದ ಜತೆಗೆ ಜಾಧವ್ ಭೇಟಿಗೆ ಅವಕಾಶ ಕಲ್ಪಿಸಬೇಕೆಂದು ಸೂಚಿಸಲಾಗಿದೆ.

ABOUT THE AUTHOR

...view details