ಲಖನೌ: ಇಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ವಿಶ್ವಾಸ ಮತಯಾಚನೆ ಮಾಡಲಿದೆ. ಈ ಹಿನ್ನೆಲೆ ಸಿಎಂ ಕುಮಾರಸ್ವಾಮಿ ಅವರನ್ನು ಬೆಂಬಲಿಸಿ ಮತ ಚಲಾಯಿಸುವಂತೆ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ಕರ್ನಾಟಕದಲ್ಲಿರುವ ತಮ್ಮ ಪಕ್ಷದ ಏಕೈಕ ಶಾಸಕ ಎನ್.ಮಹೇಶ್ಗೆ ನಿರ್ದೇಶನ ನೀಡಿದ್ದಾರೆ.
ಇಂದು ವಿಶ್ವಾಸ ಮತಯಾಚನೆ: ಹೆಚ್ಡಿಕೆ ಸರ್ಕಾರ ಬೆಂಬಲಿಸಲು ಶಾಸಕ ಮಹೇಶ್ಗೆ ಮಾಯಾ ನಿರ್ದೇಶನ - undefined
ಇಂದು ಸಮ್ಮಿಶ್ರ ಸರ್ಕಾರದ ವಿಶ್ವಾಸ ಮತಯಾಚನೆ ನಿಗದಿಯಾಗಿದೆ. ಈ ಹಿನ್ನೆಲೆ ಬಿಎಸ್ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ, ತಮ್ಮ ಪಕ್ಷದ ಶಾಸಕ ಮಹೇಶ್ಗೆ ಹೆಚ್ಡಿಕೆ ಅವರನ್ನು ಬೆಂಬಲಿಸಿ ಮತ ಚಲಾಯಿಸುವಂತೆ ನಿರ್ದೇಶನ ಮಾಡಿ ಟ್ವೀಟ್ ಮಾಡಿದ್ದಾರೆ.
![ಇಂದು ವಿಶ್ವಾಸ ಮತಯಾಚನೆ: ಹೆಚ್ಡಿಕೆ ಸರ್ಕಾರ ಬೆಂಬಲಿಸಲು ಶಾಸಕ ಮಹೇಶ್ಗೆ ಮಾಯಾ ನಿರ್ದೇಶನ](https://etvbharatimages.akamaized.net/etvbharat/prod-images/768-512-3908284-thumbnail-3x2-mayajpg.jpg)
ಜುಲೈ 19ರಂದು ರಾಜ್ಯಪಾಲ ವಜುಭಾಯ್ ವಾಲಾ ವಿಶ್ವಾಸ ಮತಯಾಚನೆ ಮಾಡಬೇಕು ಎಂದು ಸಮ್ಮಿಶ್ರ ಸರ್ಕಾರಕ್ಕೆ ಎರಡು ಬಾರಿ ಗಡುವು ನೀಡಿದ್ದರು. ಆದರೂ ವಿಶ್ವಾಸ ಮತಯಾಚನೆ ನಡೆದಿರಲಿಲ್ಲ. ಹಾಗಾಗಿ ಸೋಮವಾರಕ್ಕೆ ಸಮ್ಮಿಶ್ರ ಸರ್ಕಾರದ ವಿಶ್ವಾಸ ಮತಯಾಚನೆ ನಿಗದಿಯಾಗಿದೆ. ಈ ಹಿನ್ನೆಲೆ ಬಿಎಸ್ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ, ತಮ್ಮ ಪಕ್ಷದ ಶಾಸಕ ಮಹೇಶ್ಗೆ ಹೆಚ್ಡಿಕೆ ಅವರನ್ನು ಬೆಂಬಲಿಸುವಂತೆ ನಿರ್ದೇಶನ ಮಾಡಿ ಟ್ವೀಟ್ ಮಾಡಿದ್ದಾರೆ.
ಈ ತಿಂಗಳ ಆರಂಭದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ನ 16 ಮಂದಿ ಅತೃಪ್ತ ಶಾಸಕರ ರಾಜೀನಾಮೆಯಿಂದ ಸಮ್ಮಿಶ್ರ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಹಾಗಾಗಿ ಸಿಎಂ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಇದೀಗ ಬಹುಮತ ಸಾಬೀತು ಮಾಡುವ ಅನಿವಾರ್ಯತೆಗೆ ಸಿಲುಕಿದೆ.