ಬೆಂಗಳೂರು: ದೇಶಾದ್ಯಂತ ಅನ್ ಲಾಕ್- 1 ಜಾರಿಯಲ್ಲಿದ್ದು, ಇದರ ಬೆನ್ನಲ್ಲೇ ಜೂನ್ 17ರಿಂದ ನೆರೆಯ ರಾಜ್ಯ ಆಂಧ್ರಪ್ರದೇಶ ಬಸ್ ಸಂಚಾರಕ್ಕೆ ಕೆಎಸ್ಆರ್‌ಟಿಸಿ ಗ್ರೀನ್ ಸಿಗ್ನಲ್ ನೀಡಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಆಡಳಿತ ಮಂಡಳಿ ನೀಡಿರುವ ಮಾಹಿತಿ ಪ್ರಕಾರ ಕರ್ನೂಲ್, ಚಿತ್ತೂರು, ಅನಂತಪುರ ಸೇರಿದಂತೆ ಜಿಲ್ಲಾ ಕೇಂದ್ರಗಳಿಂದ ಬಸ್ ಸಂಚಾರ ಆರಂಭವಾಗಲಿದೆ.
ಜೂನ್ 17ರಿಂದ ಅಂತಾರಾಜ್ಯ ಬಸ್ ಸೇವೆ ಆರಂಭ: ಕೆಎಸ್ಆರ್ಟಿಸಿಯಿಂದ ಗ್ರೀನ್ ಸಿಗ್ನಲ್!
ಕೊರೊನಾ ಸೋಂಕು ಹೆಚ್ಚಾಗಿರುವ ಬೆನ್ನಲ್ಲೇ ಆಂಧ್ರಪ್ರದೇಶಕ್ಕೆ ಜೂನ್ 17ರಿಂದ ಬಸ್ ಸೇವೆ ಆರಂಭಿಸಲು ಕೆಎಸ್ಆರ್‌ಟಿಸಿ ಗ್ರೀನ್ ಸಿಗ್ನಲ್ ನೀಡಿದೆ.
ಏಲ್ಲಿಂದ ಬಸ್ ಸೇವೆ:ಬೆಂಗಳೂರಿನಿಂದ ಅನಂತಪುರ, ಹಿಂದೂಪುರ, ಕದ್ರಿ, ಪುಟ್ಟಪರ್ತಿ, ಕಲ್ಯಾಣದುರ್ಗ, ರಾಯದುರ್ಗ, ಕಡಪ, ಪ್ರೂದತ್ತೂರು, ಮಂತ್ರಾಲಯ, ತಿರುಪತಿ, ಚಿತ್ತೂರು, ಮದನಪಲ್ಲಿ, ನೆಲ್ಲೂರು ಹಾಗೂ ವಿಜಯವಾಡಕ್ಕೆ ಬಸ್ ಸೇವೆ ಆರಂಭಗೊಳ್ಳಲಿದೆ. ಇನ್ನು ಬಳ್ಳಾರಿಯಿಂದ ವಿಜಯವಾಡ, ಅನಂತ್ಪುರ, ಕರ್ನೂಲ್, ಮಂತ್ರಾಲಯಕ್ಕೆ ಬಸ್ ಸೇವೆ ಆರಂಭಗೊಳ್ಳಲಿದೆ. ಇದರ ಜತೆಗೆ ರಾಯಚೂರಿನಿಂದ ಮಂತ್ರಾಲಯಕ್ಕೆ ಬಸ್ ಸೇವೆ ಆರಂಭಗೊಳ್ಳಲಿದೆ ಎಂದು ಕೆಎಸ್ಆರ್‌ಟಿಸಿ ತಿಳಿಸಿದೆ.
ಇಂದಿನಿಂದಲೇ ಆನ್ಲೈನ್ ಬುಕ್ಕಿಂಗ್:ಕೆಎಸ್ಆರ್‌ಟಿಸಿ ಇಂದಿನಿಂದಲೇ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ಕಿಂಗ್ ಪ್ರಾರಂಭಗೊಳಿಸಿದೆ. ಬಸ್‌ನಲ್ಲಿ ಸಂಚಾರ ನಡೆಸುವವರಿಗೆ ಮಾಸ್ಕ್ ಕಡ್ಡಾಯವಾಗಿದ್ದು, ಬಸ್ ಹತ್ತುವಾಗ ಮತ್ತು ಇಳಿಯುವಾಗ ಸ್ಯಾನಿಟೈಸರ್ ಬಳಕೆ ಮಾಡುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕೆಎಸ್ಆರ್‌ಟಿಸಿ ತಿಳಿಸಿದೆ.