ತಿರುವನಂತಪುರ:ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಆರ್ಟಿಸಿ)ದ ಬಸ್ ಚಾಲಕನೊಬ್ಬನ ತನ್ನ ಅಜಾಗರೂಕತೆಯಿಂದ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.
ಕೇರಳ ಸರ್ಕಾರಿ ಬಸ್ ಚಾಲಕನ ಅಜಾಗರೂಕತೆಯ ಡ್ರೈವಿಂಗ್ ನೋಡಿ.. ವಿಡಿಯೋ - ಚಾಲನೆ ವೇಳೆ ಮೊಬೈಲ್ ಬಳಸಿದ ಚಾಲಕ
ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಆರ್ಟಿಸಿ)ದ ಬಸ್ ಚಾಲಕನೊಬ್ಬನ ಅಜಾಗರೂಕತೆಯನ್ನು ನೀವಿಲ್ಲಿ ನೋಡಬಹುದು. ತಿರುವನಂತಪುರಂನಿಂದ ಕೊಯಮತ್ತೂರ್ ನಡುವೆ ಸಂಚರಿಸುವ KL15A-279 ನಂಬರ್ನ ಬಸ್ ಚಾಲಕ, ಬಸ್ ಚಾಲನೆ ವೇಳೆ ಒಂದು ಕೈಯಲ್ಲಿ ಮೊಬೈಲ್ ಬಳಸುತ್ತಾ ಬಸ್ ಚಲಾಯಿಸಿದ್ದಾನೆ. ಪ್ರಯಾಣಿಕರ ಬಗ್ಗೆ ಅಜಾಗರೂಕತೆ ತೋರಿ, ಜನರ ಆಕ್ರೋಶಕ್ಕೆ ಗುರಿಯಾಗಿದ್ದಾನೆ. ಈ ದೃಶ್ಯವನ್ನು ಬಸ್ನಲ್ಲೇ ಇದ್ದ ಪ್ರಯಾಣಿಕನೊಬ್ಬ ಚಿತ್ರೀಕರಿಸಿ 'ಈಟಿವಿ ಭಾರತ್'ಗೆ ನೀಡಿದ್ದಾನೆ.
ತಿರುವನಂತಪುರಂನಿಂದ ಕೊಯಮತ್ತೂರ್ ನಡುವೆ ಸಂಚರಿಸುವ KL15A-279 ನಂಬರ್ನ ಸರ್ಕಾರಿ ಬಸ್ ಚಾಲಕ, ಬಸ್ ಚಾಲನೆ ವೇಳೆ ಒಂದು ಕೈಯಲ್ಲಿ ಮೊಬೈಲ್ ಬಳಸುತ್ತಾ, ಮತ್ತೊಂದು ಕೈಯಲ್ಲಿ ಸ್ಟಿಯರಿಂಗ್ ಹಿಡಿದು ಬಸ್ ಚಲಾಯಿಸಿದ್ದಾನೆ. ಘನ ಹಾಗೂ ಲಘು ವಾಹನಗಳು ವಿರುದ್ಧ ದಿಕ್ಕಿನಿಂದ ಬರುತ್ತಿದ್ದರೂ, ಪ್ರಯಾಣಿಕರ ಬಗೆಗೆ ಅಜಾಗರೂಕತೆ ತೋರಿದ್ದಾನೆ.
ಈ ದೃಶ್ಯವನ್ನು ಬಸ್ನಲ್ಲೇ ಇದ್ದ ಪ್ರಯಾಣಿಕನೊಬ್ಬ ಚಿತ್ರೀಕರಿಸಿ 'ಈಟಿವಿ ಭಾರತ್'ಗೆ ನೀಡಿದ್ದಾನೆ. ಚಾಲಕನ ಈ ಅಜಾಗರೂಕತೆಯ ಚಾಲನೆಗೆ ಎಲ್ಲೆಡೆ ವಿರೋಧ ವ್ಯಕ್ತವಾಗಿದೆ. ಅಲ್ಲದೆ ಇದು ಅಪರಾಧವೆಂದು, ಚಾಲಕನ ಪರಾವಾನಗಿ ರದ್ದತಿಗೆ ಪ್ರಯಾಣಿಕರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.